ಉದಯಪೂರ(ರಾಜಸ್ಥಾನ) ಇಲ್ಲಿ ಬಜರಂಗ ದಳದೊಂದಿಗೆ ಸಂಬಂಧಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ

ಹಿಂದೂಬಹುಸಂಖ್ಯಾತ ದೇಶದಲ್ಲಿ ಹಿಂದುತ್ವನಿಷ್ಠರ ಹತ್ಯೆಯಾಗುತ್ತಿರುವುದು ನಾಚಿಕೆಗೇಡು !

ಉದಯಪೂರ(ರಾಜಸ್ಥಾನ)- ಇಲ್ಲಿ ಬಜರಂಗ ದಳಕ್ಕೆ ಸಂಬಂಧಿಸಿದ್ದ ರಾಜೇಂದ್ರ ಉರ್ಫ ರಾಜೂ ತೇಲಿ (ವಯಸ್ಸು 38 ವರ್ಷ) ಯನ್ನು ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಯ ಬಳಿಕ ತಕ್ಷಣವೇ ಹಿಂದುತ್ವನಿಷ್ಠರು ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಿಲ್ಲ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚುತ್ತಿದ್ದಾರೆ. ಉದಯಪೂರ ಜಿಲ್ಲಾಧಿಕಾರಿ ತಾರಾಚಂದ ಮೀಣಾ ಇವರು ಪ್ರತಿಕ್ರಿಯಿಸುತ್ತಾ ತೇಲಿಯವರ ಕುಟುಂಬದವರಲ್ಲಿ ಒಬ್ಬರಿಗೆ ನೌಕರಿ ಮತ್ತು ಪರಿಹಾರಧನ ನೀಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆಯೆಂದು ತಿಳಿಸಿದ್ದಾರೆ.