ಸಮಾನ ನಾಗರಿಕ ಕಾಯಿದೆ ಸಂವಿಧಾನ ವಿರೋಧಿ ಆಗುವುದು !(ಅಂತೆ) – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ತಕರಾರು !

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಕಾರ್ಯಕಾರಿಣಿ ಸಭೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾನ ನಾಗರಿಕ ಕಾಯಿದೆ ದಲಿತ ಮತ್ತು ಆದಿವಾಸಿಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಗುರುತಿಗೆ ಹಾನಿಯುಂಟಾಗುವುದು. ಭಾರತೀಯ ಸಂವಿಧಾನದಲ್ಲಿ ಎಲ್ಲಾ ಧರ್ಮದವರಿಗೆ ಅವರ ಧರ್ಮವನ್ನು ಪಾಲಿಸಲು ಸ್ವಾತಂತ್ರ್ಯ ನೀಡಿದೆ. ಸರಕಾರ ಸಾಮಾನ್ಯ ನಾಗರಿಕರ ಸ್ವಾತಂತ್ರ್ಯದ ಮೇಲೆ ಆಘಾತ ಮಾಡಬಾರದು. ಸಮಾನ ನಾಗರಿಕ ಕಾನೂನು ಸಂವಿಧಾನ ವಿರೋಧಿ ಆಗುವುದು, ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತನ್ನ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದೆ. ಬೋರ್ಡಿನ ಅಧ್ಯಕ್ಷರಾಗಿರುವ ಮೌಲಾನಾ ಸೈಯದ್ ರಾಬೇ ಹಸನಿ ನದವಿ ಇವರ ಮುಖಂಡತ್ವದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎಂ.ಐ.ಎಂ. ನ ಅಧ್ಯಕ್ಷ ಮತ್ತು ಸಂಸದ ಅಸದ್ದೀನ್ ಓವೈಸಿ ಇವರು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ `ಧಾರ್ಮಿಕ ಪೂಜಾ ಸ್ಥಳದ ಕಾನೂನು ರದ್ದುಪಡಿಸಿದರೆ ಆಗ ದೇಶದಲ್ಲಿ ಅರಾಜಕತೆ ನಿರ್ಮಾಣವಾಗುವುದು’ ಎಂದು ಕೂಡ ಹೇಳಲಾಗಿದೆ.

ದೇಶದಲ್ಲಿ ದ್ವೇಷದ ವಿಷ ಪಸರಿಸುತ್ತಿದ್ದಾರೆ, ಮತ್ತು ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡುತ್ತಿದ್ದಾರೆ. ಇದು ಅಪಾಯಕಾರಿಯಾಗಿದೆ ಮತ್ತು ಇದರಿಂದ ದೇಶದಲ್ಲಿರುವ ಸಹೋದರತ್ವ ಬಾಂಧವ್ಯ ನಷ್ಟಗೊಳ್ಳುವುದು. ಇದರಿಂದ ದೇಶಕ್ಕೆ ಹಾನಿಯಾಗುವುದು. ಒಂದು ವೇಳೆ ಈ ಅಗ್ನಿ ಜ್ವಾಲಾಮುಖಿಯಾದರೆ ಸಂಸ್ಕೃತಿ, ಅಭಿವೃದ್ಧಿ,ನೈತಿಕತೆ ಎಲ್ಲವೂ ನಷ್ಟಗೊಳ್ಳುವುದು ಎಂದು ಬೋರ್ಡ ಹೇಳಿದೆ.

ಸಂಪಾದಕೀಯ ನಿಲುವು

ಯಾವುದೇ ಮುಸಲ್ಮಾನ ಅಥವಾ ಅವರ ಸಂಘಟನೆ ಎಂದಿಗೂ ಸಮಾನ ನಾಗರೀಕ ಕಾಯಿದೆಯನ್ನು ಸಮರ್ಥಿಸುವುದಿಲ್ಲ. ಏಕೆಂದರೆ, ಅವರಿಗೆ ಈಗ ಸಿಗುವ ಯಾವ ಸೌಲಭ್ಯಗಳು ಸಿಗುವುದಿಲ್ಲ, ಎನ್ನುವುದು ಸ್ಪಷ್ಟವಾಗಿದೆ.