ಯೋಗಋಷಿ ರಾಮದೇವಬಾಬಾ ಇವರ ವಿರುದ್ಧ ರಾಜಸ್ಥಾನದಲ್ಲಿ ದೂರು ದಾಖಲು !

ಇಸ್ಲಾಮ್ ಮತ್ತು ಕ್ರೈಸ್ತರ ವಿಷಯದಲ್ಲಿ ನೀಡಿದ ಹೇಳಿಕೆಯ ಪ್ರಕರಣ

ಬರಮಾರ (ರಾಜಸ್ಥಾನ)- ಇಸ್ಲಾಮ್ ಮತ್ತು ಕ್ರೈಸ್ತ ಪಂಥಗಳ ವಿಷಯದಲ್ಲಿ ನೀಡಿದ ಹೇಳಿಕೆಗಾಗಿ ಯೋಗಋಷಿ ರಾಮದೇವಬಾಬಾ ಇವರ ವಿರುದ್ಧ ಇಲ್ಲಿನ ಚೌಹತಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಭಾರತೀಯ ದಂ.ವಿ. ದ ಕಲಮ್ ೧೫೩ ಅ, ೧೯೫ ಅ, ಮತ್ತು ೨೯೮ ರ ಅಂತರ್ಗತ ಧಾರ್ಮಿಕ ಭಾವನೆಯನ್ನು ಕೆಣಕುವ, ಸಾಮಾಜಿಕ ಸಾಮರಸ್ಯವನ್ನು ಕದಡಲು ಪ್ರಯತ್ನಿಸುವ, ಧಾರ್ಮಿಕ ಭಾವನೆಯನ್ನು ನೋಯಿಸುವಂತಹ ಹೇಳಿಕೆ ನೀಡುವ ಆರೋಪಗಳಡಿಯಲ್ಲಿ ದೂರನ್ನು ದಾಖಲಿಸಲಾಗಿದೆ.

ಯೋಗಋಷಿ ರಾಮದೇವ ಬಾಬಾ ಏನು ಹೇಳಿದ್ದರು ?

ರಾಜಸ್ಥಾನದ ಒಂದು ಕಾರ್ಯಕ್ರಮದಲ್ಲಿ ರಾಮದೇವಬಾಬಾ ಮಾತನಾಡುತ್ತಾ,

ಇಸ್ಲಾಂನಲ್ಲಿ ೫ ಬಾರಿ ನಮಾಜ್ ಮಾಡಿದರೆ ಏನು ಬೇಕಾದರೂ ಮಾಡಬಹುದು; ಅಂದರೆ, ನೀವು ಹಿಂದೂ ಹುಡುಗಿಯರನ್ನು ಅಪಹರಿಸಿರಿ, ಅಥವಾ ಭಯೋತ್ಪಾದಕರಾಗಿ ಮನಬಂದಂತೆ ವರ್ತಿಸಿರಿ, ೫ ಬಾರಿ ನಮಾಜ್ ಮಾಡಿದರೆ ‘ಜನ್ನತ’ (ಸ್ವರ್ಗ) ಸಿಗುತ್ತದೆ. ಸ್ವರ್ಗದಲ್ಲಿ ಮದ್ಯ ಸಿಗುತ್ತಿದ್ದರೆ, ಇಂತಹ ಸ್ವರ್ಗ ‘ನರಕ’ಕ್ಕಿಂತ ಕೀಳಾಗಿದೆ. ಎಲ್ಲ ಜಾತಿಯ ಜನರನ್ನು ಇಸ್ಲಾಮಿಗೆ ಮತಾಂತರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಚರ್ಚಗೆ ಹೋಗಿ ಮೇಣದಬತ್ತಿ ಹಚ್ಚಿದರೆ ಎಲ್ಲ ಪಾಪಗಳು ತೊಳೆದು ಹೋಗುತ್ತದೆ; ಆದರೆ ಹಿಂದೂ ಧರ್ಮದಲ್ಲಿ ಹೀಗಾಗುವುದಿಲ್ಲ, ಎಂದು ಹೇಳಿದ್ದರು.