ಶಿಖ್ಕರಿಗೆ ಶಸ್ತ್ರ ಇಟ್ಟುಕೊಳ್ಳುವುದನ್ನು ನಿಷೇಧಿಸಿ

  • ಆಸ್ಟ್ರೇಲಿಯಾದಲ್ಲಿ ಭಾರತೀಯರಿಂದ ಗೃಹ ಸಚಿವ ಕ್ಲೆಯರ್ ‘ಓ’ನೀಲ ಇವರಿಗೆ ಮನವಿ

  • ನೀಹಂಗ ಶಿಖ್ಕರಿಗೆ ಆಸ್ಟ್ರೇಲಿಯಾದಿಂದ ಕೂಡಲೇ ಗಡಿಪಾರು ಮಾಡುವಂತೆ ಆಗ್ರಹ !

ಮೇಲಬರ್ನ್ (ಆಸ್ಟ್ರೇಲಿಯಾ) – ಇಲ್ಲಿ ಜನವರಿ ೨೯ ರಂದು ಖಲಿಸ್ತಾನವಾದಿಗಳಿಂದ ಭಾರತೀಯರ ಮೇಲೆ ಮಾಡಲಾದ ದಾಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗೃಹಸಚಿವ ಕ್ಲಿಯರ್ ‘ಓ’ನೀಲ ಇವರಿಗೆ ಮನವಿ ನೀಡಿದರು. ಇಲ್ಲಿಯ ಶ್ರೀ ದುರ್ಗಾ ದೇವಸ್ಥಾನಕ್ಕೆ ಸಚಿವ ಕ್ಲೆಯರ್ ‘ಓ’ನೀಲ ಇವರು ಭೇಟಿ ನೀಡಿದ ನಂತರ ಈ ಮನವಿ ನೀಡಿದರು. ಈ ಮೂಲಕ ೭ ಬೇಡಿಕೆ ಸಲ್ಲಿಸಲಾಗಿದೆ. ಅವರು ಈ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನಹರಿಸುವೆವು ಎಮದು ಆಶ್ವಾಸನೆ ನೀಡಿದ್ದಾರೆ.

ಭಾರತೀಯರಿಂದ ಸಲ್ಲಿಸಲಾದ ಬೇಡಿಕೆ

೧. ಶಿಖ್ಕರಿಗೆ ಶಸ್ತ್ರ ನೀಡಲು ಮತ್ತು ಅದನ್ನು ಉಪಯೋಗಿಸಲು ನಿಷೇಧ ಹೇರಬೇಕು.

೨. ತಾತ್ಕಾಲಿಕ ವಿಸಾದಿಂದ ಬಂದಿರುವ ನೀಹಂಗ ಶಿಖ್ಕರನ್ನು (ನೀಲಿ ಬಟ್ಟೆ ಧರಿಸಿರುವ ಶಿಖ್ಕರು) ಆಸ್ಟ್ರೇಲಿಯಾದಿಂದ ಹೊರಗಟ್ಟುವುದು.

೩. ಧಾರ್ಮಿಕ ಸ್ಥಳಗಳು ಮತ್ತು ವಾಹನಗಳ ಮೇಲೆ ಅಂಟಿಸಿರುವ ಆಕ್ಷೇಪಾರ್ಹ ಬಿತ್ತಿಪತ್ರಗಳು ತೆರವುಗೊಳಿಸುವುದು.

೪. ಜನವರಿ ೨೯, ೨೦೨೩ ರಂದು ನಡೆದ ದಾಳಿಯಲ್ಲಿನ ಸಂತ್ರಸ್ತರಿಗೆ ಆದಷ್ಟು ಬೇಗನೆ ನ್ಯಾಯ ಸಿಗಬೇಕು.

೫. ಮೇಲಬರ್ನ್ ನಲ್ಲಿ ಜನವರಿ ೨೯ ರಂದು ಖಲಿಸ್ತಾನಿಯರಿಂದ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಸರಕಾರ ಅದರಲ್ಲಿನ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು.

೬. ಶಿಖ್ಕರ ಧಾರ್ಮಿಕ ಸ್ಥಳಗಳು ಕಟ್ಟರವಾದಿಗಳಿಂದ ಮುಕ್ತ ಗೊಳಿಸಬೇಕು.

೭. ಈ ಎಲ್ಲಾ ಪ್ರಕರಣದಲ್ಲಿ ನಿಯಮಿತವಾಗಿ ವರದಿ ನೀಡಬೇಕು.