ಜಮ್ಮುವಿನ ಹಿಂದೂಗಳಿಂದ ಬಂದೂಕು ಚಲಾಯಿಸುವ ತರಬೇತಿ !

ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಿಂದ ಈ ನಿರ್ಧಾರ

ಶ್ರೀ ನಗರ – ಜಮ್ಮು ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಗುರಿ ಮಾಡುತ್ತಿರುವ ಪ್ರಕರಣದಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಆದ್ದರಿಂದ ಸ್ವಸಂರಕ್ಷಣಿಗಾಗಿ ಹಿಂದೂಗಳು ಸಿದ್ಧತೆ ನಡೆಸಿದ್ದಾರೆ. ಡಾಂಗರಿಯ ಸ್ಥಳೀಯ ಹಿಂದೂಗಳು ಮತ್ತು ಸಿಖ್ಖರು ತಮ್ಮ ಬಳಿ ಇರುವ ಬಂದೂಕುಗಳನ್ನು ಹೊರಗೆ ತೆಗೆದಿದ್ದು, ಅವರು ಬಂದೂಕು ಚಲಾಯಿಸುವ ತರಬೇತಿ ಪಡೆಯುತ್ತಿದ್ದಾರೆ. ೨೦ ವರ್ಷಗಳ ಹಿಂದೆ ಗ್ರಾಮಸ್ಥರಿಗೆ ಪೊಲೀಸರು ಸ್ವಸಂರಕ್ಷಣೆಗಾಗಿ ೭೧ ಬಂದೂಕುಗಳನ್ನು ಪೂರೈಸಿದ್ಧರು. ಈಗ ಗ್ರಾಮಸ್ಥರು ಆ ಬಂದೂಕುಗಳನ್ನು ಉಪಯೋಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂದರೆ ಜನೇವರಿ ೧,೨೦೨೩ ರಂದು ಭಯೋತ್ಪಾದಕರು ಈ ಗ್ರಾಮದಲ್ಲಿ ನುಗ್ಗಿ, ಗ್ರಾಮದ ೫ ಹಿಂದೂಗಳ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಅವರು ನಡೆಸಿದ ಬಾಂಬ್ ಸ್ಫೋಟದಲ್ಲಿ ೨ ಮಕ್ಕಳು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಬಾಲಕೃಷ್ಣ ಶರ್ಮಾ ಇವರು ಭಯೋತ್ಪಾದಕರ ಮೇಲೆ ಗುಂಡು ಹಾರಿಸಿದ್ದರು. ಆಗ ಭಯೋತ್ಪಾದಕರು ಅಲ್ಲಿಂದ ಪರಾರಿಯಾಗಿದ್ದರು. ೧೯೯೮ ರಿಂದ ೨೦೦೧ ವರೆಗೆ ಪೊಲೀಸರು ಕೆಲವು ಜನರಿಗೆ ರಕ್ಷಣೆಗಾಗಿ ಬಂದೂಕು ಪೂರೈಸಿದ್ಧರು. ಶರ್ಮಾ ಅವರಲ್ಲಿ ಒಬ್ಬರಾಗಿದ್ದಾರೆ. ಗ್ರಾಮದ ಜನರ ಹತ್ಯೆಯಾದ ಬಳಿಕ ಅಲ್ಲಿನ ಜನರು ಆಕ್ರೋಶಗೊಂಡಿದ್ದಾರೆ. ಈ ರೀತಿ ಭಯೋತ್ಪಾದಕರು ಗ್ರಾಮದ ಮೇಲೆ ಪುನಃ ಆಕ್ರಮಣ ನಡೆಸಬಾರದೆಂದು ಅಲ್ಲಿಯ ಜನರು ಬಂದೂಕು ನಡೆಸುವ ತರಬೇತಿ ಪಡೆಯುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಜಮ್ಮು ಕಾಶ್ಮೀರದಲ್ಲಿರುವ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗದ ಕಾರಣ ಅವರಿಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿ ಕೊಳ್ಳಬೇಕಾಗುತ್ತಿದೆ. ಇದು ವ್ಯವಸ್ಥೆಯ ವಿಫಲತೆಯಾಗಿದೆ !
  • ಪೊಲೀಸರು ಮತ್ತು ಸರಕಾರ ಕೇವಲ ಕಾಶ್ಮೀರದಲ್ಲಿರುವವರ ಬಗ್ಗೆ ಅಷ್ಟೇ ಅಲ್ಲದೆ ಭಾರತದಾದ್ಯಂತ ಇರುವ ಜಿಹಾದಿಗಳಿಂದ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ. ಇದು ವಸ್ತು ಸ್ಥಿತಿಯಾಗಿದೆ. ಆದ್ದರಿಂದ ಹಿಂದೂಗಳು ಸ್ವ ಸಂರಕ್ಷಣೆ ಮಾಡಿಕೊಳ್ಳುವ ಆವಶ್ಯಕತೆ ಇದೆ !