‘ಭಾರತವು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಬ್ಬಾಳಿಕೆ ನಡೆಸುತ್ತಿದೆ !’ (ಅಂತೆ) – ಪಾಕಿಸ್ತಾನ

ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುವ ಪಾಕಿಸ್ತಾನ ಕಾಶ್ಮೀರದ ಕುರಿತು ಹೇಳಿಕೆ ಮುಂದುವರಿಕೆ !

ಪ್ರಧಾನಮಂತ್ರಿ ಶಹಭಾಜ ಶರೀಫ್

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಿಂದ ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಬ್ಬಾಳಿಕೆ ನಡೆಯುತ್ತಿದ್ದರು ಕೂಡ ಕಾಶ್ಮೀರದ ನಾಗರೀಕರು ಸ್ವಂತ ಅಧಿಕಾರಕ್ಕಾಗಿ ಸಂಘರ್ಷ ಮುಂದುವರಿಸುತ್ತಿದ್ದಾರೆ, ಎಂದು ಕಾಶ್ಮೀರ ಏಕತಾ ದಿನ ಆಚರಿಸುವಾಗ ಪಾಕಿಸ್ತಾನವು ಈ ಹೇಳಿಕೆ ನೀಡಿದೆ. ಪಾಕಿಸ್ತಾನವು ಫೆಬ್ರವರಿ ೫ ರಂದು ಕಾಶ್ಮೀರದಲ್ಲಿ ಹಿಂದೂಗಳ ನರಸಂಹಾರದ ದುರುಪಯೋಗ ಪಡಿಸಲು ಪಾಕಿಸ್ತಾನ ‘ಕಾಶ್ಮೀರ ಏಕತಾ ದಿನ’ ಆಚರಿಸುತ್ತದೆ. ಕಾಶ್ಮೀರ ಏಕತಾ ದಿನದ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಶಹಭಾಜ ಶರೀಫ್ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ.

ಜಮ್ಮು ಕಾಶ್ಮೀರದ ಬಗ್ಗೆ ಇಸ್ಲಾಮಿ ದೇಶದ ಸಂಘಟನೆಯ ಸಂಪರ್ಕ ಗುಂಪುಗಳ ವಿಶ್ವಸಂಸ್ಥೆಯೊಂದಿಗೆ ಅನೌಪಚಾರಿಕ ಸಭೆ ನಡೆಯಿತು. ಅದರಲ್ಲಿ ಅಝರಬೈಜಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ತುರ್ಕಿಯೆ ಸಹಭಾಗಿಯಾಗಿದ್ದರು. ಇದರಲ್ಲಿ ಅವರು ಕಾಶ್ಮೀರ ಏಕತಾ ದಿನದ ಸ್ಮರಣೆ ಮಾಡಿದರು.

ಸಂಪಾದಕೀಯ ನಿಲುವು

ಮುಂಬರುವ ಕಾಲದಲ್ಲಿ ಪಾಕಿಸ್ತಾನ ವಿಭಜನೆಯಾಗುವುದು ಎಂದು ಹೇಳಲು ಯಾವುದೇ ಭವಿಷ್ಯವಾಣಿಯ ಅಗತ್ಯವಿಲ್ಲ. ಇದು ಸ್ಪಷ್ಟವಾಗಿದ್ದರೂ ಕೂಡ ಪಾಕಿಸ್ತಾನ ಕಾಶ್ಮೀರ ಕುರಿತಾದ ರಂಪಾಟ ಮಾತ್ರ ಮುಗಿದಿಲ್ಲ. ಪಾಕಿಸ್ತಾನದಿಂದ ಈ ರೀತಿಯ ಅಪೇಕ್ಷೆ ಮಾಡದೇ ಇದ್ದರೂ ಕೂಡ ಅದರ ಕರ್ಮದ ಫಲ ಅದು ಅನುಭವಿಸಲೇಬೇಕು !