ಬಿರಭೂಮ (ಬಂಗಾಲ) ಇಲ್ಲಿಯ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತ ಹತ !

ಮೃತಪಟ್ಟವನ ಕುಟುಂಬದಿಂದ ಕಾಂಗ್ರೆಸ್ ಮೇಲೆ ಆರೋಪ !

ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಕೈವಾಡದ ಆರೋಪ !

ಕೋಲಕತಾ (ಬಂಗಾಲ) – ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಮಾರಗ್ರಾಮದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತ ನ್ಯೂಟನ್ ಶೇಖ ಇವನು ಸಾವನ್ನಪ್ಪಿದ್ದಾನೆ. ಹಾಗೂ ತೃಣಮೂಲ ಪಕ್ಷದ ಪಂಚಾಯತ ಮುಖಂಡ ಭಾವು ಲಾಲ್ಟು ಶೇಖ ಗಾಯಗೊಂಡಿದ್ದಾನೆ. ನ್ಯೂಟನ್ ಶೇಖ ಇವರ ಕುಟುಂಬದವರು, ‘ಈ ದಾಳಿಗಾಗಿ ಕಾಂಗ್ರೆಸ್ಸಿನ ಬೆಂಬಲಿಗರೇ ಜವಾಬ್ದಾರರು’ ಎಂದು ಆರೋಪಿಸಿದ್ದಾರೆ.

೧. ಈ ಸ್ಪೋಟದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಬಂಗಾಲದ ನಗರ ವಿಕಾಸ ಸಚಿವ ಫೀರಹಾದ ಹಾಕಿಮ ಇವರು, ಈ ದಾಳಿಯಲ್ಲಿ ಮಾವೋವಾದಿ ಸಹಭಾಗಿ ಇರುವ ಸಾಧ್ಯತೆ ಇದೆ, ಕಾರಣ ಈ ಜಿಲ್ಲೆಯ ಗಡಿ ಜಾರ್ಖಂಡ ರಾಜಕ್ಕೆ ಹತ್ತಿರವಿದೆ ಎಂದು ಹೇಳಿದರು.

೨. ಇದರ ಬಗ್ಗೆ ಬಂಗಾಲ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಅಧೀರ ರಂಜನ ಚೌದರಿ ಇವರು, ಮಾರಗ್ರಾಮದಲ್ಲಿ ಕಾಂಗ್ರೆಸ್ಸಿನ ಬಳಿ ಸಂಘಟನಾತ್ಮಕ ಶಕ್ತಿ ಇಲ್ಲ; ಆದರೆ ಇದನ್ನು ತಿಳಿದುಕೊಂಡು ಯಾರಾದರೂ ನಮ್ಮ ಪಕ್ಷದ ಪ್ರಚಾರ ಮಾಡುಲು ಬಯಸಿದರೆ ನಮ್ಮ ಆಕ್ಷೇಪವಿಲ್ಲ. ಪ್ರತಿಯೊಬ್ಬರಿಗೂ ತಿಳಿದಿದೆ ದಾಳಿ ಕೋರರು ಮತ್ತು ಸಂತ್ರಸ್ತರು ಇಬ್ಬರೂ ಕೂಡ ತೃಣಮೂಲ ಕಾಂಗ್ರೆಸ್ಸಿನವರೇ ಆಗಿದ್ದಾರೆ. ಎಂದು ಹೇಳಿದರು.

ಸಂಪಾದಕರು ನಿಲುವು

ನಿರಂತರ ಬಾಂಬ್ ಸ್ಫೋಟ ನಡೆಯುವ ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಯಾವಾಗ ಹೇರುವುದು ?