ಸನಾತನ ಇದು ದೇಶದ ರಾಷ್ಟ್ರೀಯ ಧರ್ಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ನವದೆಹಲಿ – ಸನಾತನ ಇದು ದೇಶದ ರಾಷ್ಟ್ರೀಯ ಧರ್ಮವಾಗಿದೆ. ಹಿಂದೂಗಳು ಏನೇ ಮಾಡಿದರೂ ಅದು ಮಂತ್ರ ತಂತ್ರದ ಬಗ್ಗೆ ಮಾತನಾಡುತ್ತಾರೆ; ಆದರೆ ಇತರ ಪಂಥದವರು ಈ ರೀತಿ ಮಾಡಿದರೆ ಆಗ ಯಾರು ಏನು ಮಾತನಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಆಜ ತಕ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಮಧ್ಯ ಪ್ರದೇಶದಲ್ಲಿನ ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಯೋಗಿ ಆದಿತ್ಯನಾಥ ಮಾತನಾಡುತ್ತಿದ್ದರು. ‘ಸನಾತನ ಧರ್ಮದ ಬೇರು ಎಷ್ಟು ಆಳವಾಗಿದೆ ಎಂದರೆ ಯಾರು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ’ , ಎಂದು ಅವರು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.