ಹಿಂದೂಗಳಿಗೆ ರಕ್ಷಣೆ ಇಲ್ಲದೆ ಕಾಶ್ಮೀರ ಕಣಿವೆಯಲ್ಲಿ ಕೆಲಸ ಮಾಡಲು ಅನಿವಾರ್ಯಗೊಳಿಸುವುದು ಇದು ಅಮಾನವೀಯತೆ !

ರಾಹುಲ ಗಾಂಧಿಯಿಂದ ಪ್ರಧಾನಿ ಮೋದಿಯವರಿಗೆ ಪತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಹುಲ ಗಾಂಧಿ

ನವದೆಹಲಿ – ಮಾನ್ಯ ಪ್ರಧಾನ ಮಂತ್ರಿ, ಭಾರತ ಜೋಡೋ ಯಾತ್ರೆಯಲ್ಲಿ ಕಾಶ್ಮೀರಿ ಹಿಂದೂಗಳ ಒಂದು ಪ್ರತಿನಿಧಿ ಮಂಡಳಿ ನನ್ನನ್ನು ಭೇಟಿಯಾದರು. ಆಗ ಅವರು ತಮ್ಮ ದುಃಖದ ಪರಿಸ್ಥಿತಿ ನನಗೆ ಹೇಳಿದರು. ಭಯೋತ್ಪಾದಕರ ಗುರಿಯಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಯಾವುದೇ ರಕ್ಷಣೆ ಇಲ್ಲದೆ ಕಣಿವೆಗೆ ಹೋಗಲು ಅನಿವಾರ್ಯಗೊಳಿಸುವುದು ಇದು ಅಮಾನವಿಯ ನಿರ್ಧಾರವಾಗಿದೆ. ನೀವು ಈ ಪ್ರಕರಣದಲ್ಲಿ ಯೋಗ್ಯವಾದ ನಿರ್ಧಾರ ತೆಗೆದುಕೊಳ್ಳುವಿರಿ ಎಂಬ ಆಸೆ ಇದೆ, ಎಂದು ಕಾಂಗ್ರೆಸ್ಸಿನ ನಾಯಕ ಸಂಸದ ರಾಹುಲ ಗಾಂಧಿಯವರು ಪ್ರಧಾನಮಂತ್ರಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿಯವರು ಪತ್ರದಲ್ಲಿ, ಹತ್ಯೆಯಿಂದ ಕಾಶ್ಮೀರ ಕಣಿವೆಯಲ್ಲಿ ಭಯ ಮತ್ತು ನಿರಾಶೆಯ ವಾತಾವರಣವಿದೆ. ಕಾಶ್ಮೀರ ಕಣಿವೆಯಲ್ಲಿ ಕಾರ್ಮಿಕರನ್ನು ಯಾವುದೇ ಸುರಕ್ಷೆ ಇಲ್ಲದೆ ಕೆಲಸಕ್ಕಾಗಿ ಹಿಂತಿರುಗಿ ಬರಲು ಹೇಳಿದೆ, ಇದು ಅವರ ತೋರುವ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಕಾಶ್ಮೀರಿ ಹಿಂದೂಗಳಿಗಾಗಿ ಈಗ ಕಳವಳ ವ್ಯಕ್ತಪಡಿಸುವ ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ಇವರು ಕಾಶ್ಮೀರದ ಹಿಂದೂಗಳಿಗಾಗಿ ಇಲ್ಲಿಯವರೆಗೆ ಏನು ಮಾಡಿದ್ದಾರೆ ? ಅದನ್ನು ಕೂಡ ಹೇಳಬೇಕು!