ಕೇಂದ್ರ ಸರಕಾರ ಗೋದಿ ಹಿಟ್ಟನ್ನು ಕೇಜಿಗೆ ೨೯ ರೂಪಾಯಿ ೫೦ ಪೈಸೆಯಂತೆ ಮಾರುವರು !

ನವದೆಹಲಿ – ಕೇಂದ್ರ ಸರಕಾರ ಗೋದಿ ಹಿಟ್ಟನ್ನು ಕೇಜಿಗೆ ೨೯ ರೂಪಾಯಿ ೫೦ ಪೈಸೆಯಂತೆ ಮಾರಾಟ ಮಾಡುವ ನಿರ್ಣಯವನ್ನು ಕೈಗೊಂಡಿದೆ. ‘ನಾಫೆಡ್’ ಮತ್ತು ‘ಎನ್.ಎಫ್.ಸಿ.ಸಿ.’ ಈ ಸಂಸ್ಥೆಯ ಮೂಲಕ ಫೆಬ್ರುವರಿ ೬ ರಿಂದ ಮಾರಾಟ ಮಾಡುವರು. ದೇಶದಲ್ಲಿ ಆಹಾರ ಪದಾರ್ಥದ ಹೆಚ್ಚುತ್ತಿರುವ ಬೆಲೆ ಏರಿಕೆ ಮೇಲೆ ನಿಯಂತ್ರಣ ಪಡೆಯಲು ಈ ನಿರ್ಣಯ ತೆಗೆದುಕೊಂಡಿದೆ. ವಿವಿಧ ಅಂಗಡಿಗಳಲ್ಲಿ ಕೇಂದ್ರ ಸರಕಾರದ ಈ ಹಿಟ್ಟು ಮಾರಾಟಕ್ಕೆ ಇಡಲಿದೆ.