ತಮಿಳುನಾಡಿನಲ್ಲಿ ಹಿಂದೂ ನಾಯಕ ಮಣಿಕಂದನ್ ನ ಹತ್ಯೆ

(ದ್ರಮುಕ ಎಂದರೆ ದ್ರಾವಿಡ ಮುನ್ನೆತ್ರ ಕಳಘಂ – ದ್ರವಿಡ ಪ್ರಗತಿ ಸಂಘ)

ಮಧುರೈ (ತಮಿಳುನಾಡು) – ಜನವರಿ ೩೧ ರಂದು ಇಲ್ಲಿಯ ‘ಹಿಂದೂ ಮಕ್ಕಳ ಕಚ್ಚಿ’ (ಹಿಂದೂ ಜನತಾ ಪಕ್ಷ) ಪಕ್ಷದ ದಕ್ಷಿಣ ಮಧುರೈ ಉಪಸಚಿವ ಮಣಿಕಂದನ್ (೪೧ ವರ್ಷ) ಇವರ ಹತ್ಯೆ ಮಾಡಲಾಯಿತು. ಮಣಿಕಂದನ್ ಇವರದು ಇಲ್ಲಿಯ ಎಂ.ಕೆ. ನಗರದಲ್ಲಿ ಆಭರಣಗಳ ಅಂಗಡಿ ಇದೆ. ಅಂಗಡಿ ಬಾಗಿಲು ಹಾಕಿ ಅವರು ಮನೆಗೆ ಹಿಂತಿರುಗುವಾಗ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರ ಹತ್ಯೆ ಮಾಡಿದ್ದಾರೆ. ಈ ಹತ್ಯೆಯ ಹಿಂದಿನ ಕಾರಣ ಮತ್ತು ದಾಳಿಕೋರರ ಬಗ್ಗೆ ಇಲ್ಲಿವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ.

ಸಂಪಾದಕೀಯ ನಿಲುವು

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕನ ಸರಕಾರ ಇರುವುದರಿಂದ ಹಿಂದೂ ಮತ್ತು ಅವರ ನಾಯಕರ ರಕ್ಷಣೆ ಹೇಗೆ ಸಾಧ್ಯ ?