|
ನವದೆಹಲಿ – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಮುಂಗಡ ಆಯವ್ಯಯ ಪತ್ರ ೨೦೨೩ -೨೦೨೪ ಗಾಗಿ ಪ್ರಸ್ತುತಪಡಿಸಿದರು. ನಿರ್ಮಲಾ ಸೀತಾರಾಮನ್ ಇವರು ಕೃಷಿ, ಉದ್ಯೋಗ, ಶಿಕ್ಷಣ, ಮೂಲಭೂತ ಸೌಲಭ್ಯ, ರೈಲ್ವೆ ಇಂತಹ ವಿವಿಧ ಕ್ಷೇತ್ರಗಳಿಗಾಗಿ ವ್ಯವಸ್ಥೆಯ ಘೋಷಣೆ ಮಾಡಿದರು. ಸೀತಾರಾಮನ ಇವರು ಕಸ್ಟಮ್ ಮುಂತಾದರಲ್ಲಿನ ಬದಲಾವಣೆ ಘೋಷಣೆ ಮಾಡಿದರು. ವಿದೇಶದಿಂದ ಆಮದವಾಗುವ ಆಟಿಕೆ ಸಾಮಾನುಗಳ ಕಸ್ಟಮ್ ಶೇಕಡ ೧೩ ಇಳಿಸಿದರು. ಕಳೆದ ೯ ವರ್ಷಗಳ ನಂತರ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಆದ್ದರಿಂದ ಮಧ್ಯಮ ವರ್ಗದ ನಾಗರೀಕರಿಗೆ ನೆಮ್ಮದಿ ಸಿಕ್ಕಿದೆ. ೨೦೧೪ ರ ನಂತರ ಈ ವರ್ಷದ ಆದಾಯ ತೆರಿಗೆ ಮಿತಿ ೫ ಲಕ್ಷದಿಂದ ೭ ಲಕ್ಷಕ್ಕೆ ಮಾಡಲಾಗಿದೆ. ಇದರಿಂದ ಜನರಿಗೆ ೭ ಲಕ್ಷ ರೂಪಾಯಿವರೆಗೆ ವಾರ್ಷಿಕ ಉತ್ಪನ್ನದ ಮೇಲೆ ಯಾವುದೇ ತೆರಿಗೆ ಜಾರಿ ಆಗುವುದಿಲ್ಲ. ಆದರೆ ೭ ಲಕ್ಷದ ನಂತರದ ಆದಾಯದ ಮೇಲೆ ತೆರಿಗೆ ವಿಧಿಸುವುದು. ೯ ಲಕ್ಷ ರೂಪಾಯಿಯವರೆಗೆ ವಾರ್ಷಿಕ ಆದಾಯಕ್ಕೆ ೪೫ ಸಾವಿರ ರೂಪಾಯಿ ಹಾಗೂ ೧೫ ಲಕ್ಷ ರೂಪಾಯ ವಾರ್ಷಿಕ ಆದಾಯಕ್ಕೆ ಒಂದುವರೆ ಲಕ್ಷ ರೂಪಾಯಿ ತೆರಿಗೆ ನೀಡಬೇಕು. ವಿಶೇಷವೆಂದರೆ ಹೊಸ ಆದಾಯ ಪ್ರಣಾಳಿ ಜೊತೆಗೆ ಹಳೆಯ ಆದಾಯ ಪ್ರಣಾಳಿ ಕೂಡ ಮುಂದುವರೆಯುವುದು.
೭ ಲಕ್ಷ ರೂಪಾಯ ನಂತರದ ಹೊಸ ತೆರಿಗೆ ರಚನೆ | ರೂಪಾಯಿ ತೆರೆಗೆ (ಶೇಕಡವಾರು) |
೦ – ೩ ಲಕ್ಷ | ತೆರಿಗೆ ಇಲ್ಲ |
೩ – ೬ ಲಕ್ಷ | ೫% |
೬ – ೯ ಲಕ್ಷ | ೧೦% |
೯ – ೧೨ ಲಕ್ಷ | ೧೫% |
೧೨ – ೧೫ ಲಕ್ಷ | ೨೦% |
೧೫ ಕಿಂತಲೂ ಹೆಚ್ಚು | ೩೦% |
ಆದಾಯ ತೆರಿಗೆ ಕಟ್ಟಲು ಸುಲಭ
ಆದಾಯ ತೆರಿಗೆ ತುಂಬುವ ಪ್ರಕ್ರಿಯೆ ಮಾಡುವುದಕ್ಕಾಗಿ ಬೇಕಾಗುವ ಸರಾಸರಿ ಸಮಯ ೨೦೨೩ – ೨೪ ರಲ್ಲಿ ೯೩ ದಿನದಿಂದ ೧೬ ದಿನಕ್ಕೆ ತರಲಾಗಿದೆ. ಶೇಕಡ ೪೫ ಆದಾಯ ತೆರಿಗೆ ಹಿಂತಿರುಗಿ ಪಡೆಯುವ ಮನವಿಯ ಬಗ್ಗೆ (ಫಾರಂ ಮೇಲೆ) ೨೪ ಗಂಟೆಯ ಒಳಗೆ ಪ್ರಕ್ರಿಯೆ ನಡೆಯುತ್ತಿದೆ.
Finance Minister Nirmala Sitharaman in her Union Budget speech made five major announcements to overhaul and sweeten the new income tax regime.#BudgetonIndiaToday https://t.co/0ctQ2xyWMu
— IndiaToday (@IndiaToday) February 1, 2023
ಯಾವುದು ತುಟ್ಟಿ ?
- ಚಿನ್ನ ಮತ್ತು ಬೆಳ್ಳಿ ಇದನ್ನು ವಿದೇಶದಿಂದ ಆಮದು ಮಾಡಿರುವ ಪಾತ್ರೆ ಮತ್ತು ಒಡವೆಗಳು
- ಪ್ಲಾಟಿನಮ್ಮಿನ ಒಡವೆಗಳು
- ವಿದೇಶಿ ಅಡುಗೆ ಮನೆಯ ಚಿಮಣಿ
- ನಿರ್ಧರಿತ ಬ್ರಾಂಡಿನ ಸಿಗರೇಟ್
- ಕೊಡೆ (ಛತ್ರಿ)
- ಕ್ಷ ಕಿರಣ ಯಂತ್ರ (ಎಕ್ಸರೇ ಮಷೀನ್)
- ವಜ್ರ
ಯಾವುದು ಅಗ್ಗ
- ಸಂಚಾರ ವಾಣಿ
- ದೂರದರ್ಶನದ ಬಿಡಿ ಭಾಗಗಳು
- ಎಲೆಕ್ಟ್ರಿಕ್ ಕಾರ್
- ಲಿಥಿಯಂ ಐರನ್ ಬ್ಯಾಟರಿ
- ವಿದೇಶದಿಂದ ಆಮದ ಮಾಡುವ ಆಟಿಕೆಗಳು
- ಸೈಕಲ್
- ಬಯೋಗ್ಯಾಸ ಸಂಬಂಧಿತ ಉಪಕರಣಗಳು
- ಎಲ್ಇಡಿ ದೂರದರ್ಶನ
- ಮೊಬೈಲ್ ಕ್ಯಾಮೆರಾ ಲೆನ್ಸ್
- ವಜ್ರದ ಒಡೆದೆ
- ಬಟ್ಟೆಗಳು
ಭಾರತೀಯ ರೈಲ್ವೆಗಾಗಿ ೧೦೦ ಯೋಜನೆ ಹಮ್ಮಿಕೊಳ್ಳಲಾಗುವುದು
ಈ ವರ್ಷದ ಮುಂಗಡ ಆಯವ್ಯಯ ಪತ್ರದಲ್ಲಿ ಮುಂಬರುವ ವರ್ಷದಲ್ಲಿ ರೈಲ್ವೆಗಾಗಿ ೨ ಲಕ್ಷ ೪೦ ಲಕ್ಷ ಕೋಟಿ ರೂಪಾಯಿ ವ್ಯವಸ್ಥೆ ಮಾಡಿದೆ. ರೈಲ್ವೆಯ ಹೊಸ ಮಾರ್ಗ ಮತ್ತು ಹೊಸ ಪ್ರಕಲ್ಪಕ್ಕೆ ವೇಗ ನೀಡುವುದು. ಭಾರತೀಯ ರೈಲ್ವೆಯ ೧೦೦ ಮಹತ್ವದ ಯೋಜನೆ ಪ್ರಧಾನ್ಯತೆಯಿಂದ ನಡೆಸುವುದು. ಇದರಲ್ಲಿ ರೈಲ್ವೆ ಪ್ರವಾಸ ಹೆಚ್ಚು ಸುರಕ್ಷಿತ ಮತ್ತು ಸುಖಕರ ಮಾಡುವುದರ ಬಗ್ಗೆ ವತ್ತು ನೀಡುವುದು. ರೇಲ್ವೆಗಾಗಿ ಡಿಜಿಟಲ್ ಟಿಕೆಟ್ ಪ್ರಣಾಳಿ ಜಾರಿ ಮಾಡುವುದು.
ಆಯವ್ಯಯ ಮುಂಗಡ ಪತ್ರದಲ್ಲಿನ ಮುಖ್ಯ ವೈಶಿಷ್ಟಗಳು
- ಆದಿವಾಸಿ ವಿದ್ಯಾರ್ಥಿಗಳಿಗಾಗಿ ೭೦ ಸಾವಿರ ‘ಏಕಲವ್ಯ ಮಾಡಲ್ ಸ್ಕೂಲ್’ ಪ್ರಾರಂಭ ಮಾಡುವುದು
- ಮುಂದಿನ ೩ ವರ್ಷಗಳಲ್ಲಿ ೩೮ ಸಾವಿರ ಶಿಕ್ಷಕರ ನೇಮಕಾತಿ
- ದೇಶದಲ್ಲಿ ೫೭ ಹೊಸ ‘ನರ್ಸಿಂಗ್ ಕಾಲೇಜ್’ ಸ್ಥಾಪನೆ ಮಾಡುವುದು.
- ಕೃತಕ ಬುದ್ಧಿವಂತಿಕೆಯ (ಆರ್ಟಿಫಿಶಿಯಲ್ ಇಂಟಿಲಿಜೆನ್ಸಿ) ಉಪಯೋಗದ ಬಗ್ಗೆ ವತ್ತು ನೀಡುವುದು.
- ಪ್ರಾದೇಶಿಕ ಭಾಷೆಯನ್ನು ಹೆಚ್ಚು ಬಳಸುವುದು.
- ಡಿಜಿಟಲ್ ಗ್ರಂಥಾಲಯದ ಸಂಖ್ಯೆ ಹೆಚ್ಚಿಸುವುದು.
- ‘ಹಿರಿಯ ನಾಗರೀಕರ ಉಳಿತಾಯ ಯೋಜನೆ’ ಇತಿಮಿತಿ. ೪.೩೦ ಲಕ್ಷದಿಂದ ೯ ಲಕ್ಷಕ್ಕೆ ಹೆಚ್ಚಿಸುವುದು.
- ಜಾಯಿಂಟ್ ಅಕೌಂಟ್ ಗರಿಷ್ಠ ಹಣ ಜಮಾ ಮಾಡುವುದಕ್ಕೆ ಇತಿಮಿತಿ ೧೫ ಲಕ್ಷ ರೂಪಾಯಿಯವರೆಗೆ ಹೆಚ್ಚಿಸುವುದು.
- ಮಹಿಳೆಯರಿಗಾಗಿ ೨ ವರ್ಷಕ್ಕಾಗಿ ಹೊಸ ಉಳಿತಾಯ ಯೋಜನೆ
- ಮಹಿಳೆಯರು ೨ ನಕ್ಷ ರೂಪಾಯವರೆಗೆ ‘ಮಹಿಳಾ ಸನ್ಮಾನ ಬಚತ’ ಪತ್ರ ಖರೀದಿಸಬಹುದು. ಇದಕ್ಕೆ ವಾರ್ಷಿಕ ಶೇಕಡ ೭.೫ ಬಡ್ಡಿ ನೀಡುವುದು.
- ದೇಶದಲ್ಲಿ ೫೦ ಹೆಚ್ಚಿನ ವಿಮಾನ ನಿಲ್ದಾಣ ನಿರ್ಮಾಣ
- ರೈತರಿಗಾಗಿ ಡಿಜಿಟಲ್ ಪ್ರಶಿಕ್ಷಣ ನೀಡುವುದು
- ಆಹಾರ ಧಾನ್ಯಗಳು (ಜೋಳ, ಸಜ್ಜೆ, ರಾಗಿ, ಸತು ಮುಂತಾದ ಧಾನ್ಯ) ಬೆಳೆಯುವುದಕ್ಕಾಗಿ ಶ್ರೀ ಅನ್ನ ಯೋಜನೆ ಶುರು ಮಾಡುವುದು.
- ಕೃಷಿ ಕ್ಷೇತ್ರಕ್ಕಾಗಿ ಭಂಡಾರಗಳ ಕ್ಷಮತೆ ಹೆಚ್ಚಿಸುವುದು. ಅದಕ್ಕಾಗಿ ‘ಇಂಡಿಯನ್ ಮಿಲ್ಲೆಟ್ಸ್ ಇನ್ಸ್ಟಿಟ್ಯೂಟ್’ ಸ್ಥಾಪನೆ ಮಾಡುವುದು.
- ಎಲ್ಲಾ ಅಂತ್ಯೋದಯ ಯೋಜನೆ ಲಾಭ ಪಡೆಯುವವರಿಗೆ ಮತ್ತು ಪ್ರಾಧಾನ್ಯ ಕುಟುಂಬದವರಿಗೆ ಮುಂದಿನ ಒಂದು ವರ್ಷಕ್ಕಾಗಿ ಉಚಿತವಾಗಿ ಧಾನ್ಯ ನೀಡುವುದು.