ಮುಂಬರುವ ಆರ್ಥಿಕ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿ.ಡಿ.ಪಿ) ೬.೫ ಇರುವುದು !

ನವ ದೆಹಲಿ- ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಸಂಸತ್ತಿನಲ್ಲಿ ಅರ್ಥಸಂಕಲ್ಪ ಅಧಿವೇಶನದಲ್ಲಿ ಆರ್ಥಿಕ ವರ್ಷ ೨೦೨೩-೨೪ ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಇದರಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿ.ಡಿ.ಪಿ) ಪ್ರಮಾಣ (ದರ) ೬.೫ ರಷ್ಟು ಉಲ್ಲೇಖಿಸಲಾಗಿದೆ. ಈ ಸಮೀಕ್ಷೆಯಲ್ಲಿ ಭಾರತ ಜಗತ್ತಿನ ಎಲ್ಲಕ್ಕಿಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆಯಾಗಿದೆ ಎಂದು ನಮೂದಿಸಲಾಗಿದೆ.

ಆರ್ಥಿಕ ಸಮೀಕ್ಷೆ ಎಂದರೇನು ?

ಆರ್ಥಿಕ ಸಮೀಕ್ಷೆ ಎಂದರೆ ದೇಶದ ಅರ್ಥವ್ಯವಸ್ಥೆಯ ಸ್ಥಿತಿ ಹೇಗಿದೆ ?, ಎಂಬುದನ್ನು ತೋರಿಸುವುದು. ಆರ್ಥಿಕ ಸಮೀಕ್ಷೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರ ಹಾಗೂ ಮುಂಬರುವ ವರ್ಷದ ಸೂಚನೆ, ಸವಾಲುಗಳು ಹಾಗೂ ಉಪಾಯವನ್ನು ನಮೂದಿಸಲಾಗುತ್ತದೆ. ಅರ್ಥಸಂಕಲ್ಪದ ಒಂದು ದಿನದ ಮೊದಲು ಅರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಆರ್ಥಿಕ ಸಮೀಕ್ಷೆ ಒಂದು ರೀತಿಯಲ್ಲಿ ಆರ್ಥವ್ಯವಸ್ಥೆಗೆ ದಿಶೆ ನೀಡುವ ಕಾರ್ಯ ಮಾಡುತ್ತದೆ; ಏಕೆಂದರೆ ಭಾರತದ ಅರ್ಥವ್ಯವಸ್ಥೆ ಹೇಗೆ ನಡೆಯುತ್ತಿದೆ ? ಹಾಗೂ ಅದನ್ನು ಸುಧಾರಿಸಲು ನಾವು ಏನು ಮಾಡುವ ಅವಶ್ಯಕತೆಯಿದೆ, ಎಂಬುದನ್ನು ಆರ್ಥಿಕ ಸಮೀಕ್ಷೆ ತೋರಿಸುತ್ತದೆ.