ಗೋರಖನಾಥ ಮಂದಿರದ ಮೇಲೆ ದಾಳಿ ಮಾಡಿದ ಅಹಮ್ಮದ ಮುರ್ತಜಾನಿಗೆ ಗಲ್ಲುಶಿಕ್ಷೆ !

ಗೋರಖಪುರದ ಗೋರಖನಾಥ ಮಂದಿರದ ಮೇಲೆ ದಾಳಿ ಮಾಡಿದ ಆರೋಪಿ ಅಹಮ್ಮದ ಮುರ್ತಜಾ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಗೋರಖಪುರದ ಗೋರಖನಾಥ ಮಂದಿರದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಭಯೋತ್ಪಾದನಾನಿಗ್ರಹ ದಳದ ನ್ಯಾಯಾಲಯವು ಆರೋಪಿ ಅಹಮ್ಮದ ಮುರ್ತಜಾನನ್ನು ದೋಷಿಯೆಂದು ನಿರ್ಧರಿಸಿ ಅವನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ೪ ಎಪ್ರಿಲ್ ೨೦೨೨ ರಂದು ಮುರ್ತಜಾ ಇವನು ದೇವಸ್ಥಾನದ ಹೊರಗಿನ ಸುರಕ್ಷಾ ರಕ್ಷಕರ ಮೇಲೆ ‘ಅಲ್ಲಾಹೂ ಅಕ್ಬರ’ನ (‘ಅಲ್ಲಾ ಶ್ರೇಷ್ಠನಾಗಿದ್ದಾರೆ’ ಎಂದು) ಘೋಷಣೆ ಕೂಗುತ್ತಾ ಮಾರಕಾಸ್ತ್ರದಿಂದ ದಾಳಿ ಮಾಡಿ ಅವರನ್ನು ಗಾಯಗೊಳಿಸಿದ್ದನು ಹಾಗೂ ಅವರಿಂದ ಶಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದನು. ನಂತರ ಪೊಲೀಸರು ಅವನನ್ನು ಬಂಧಿಸಿದ್ದರು. ಅವನು ತನ್ನನ್ನು ಮಾನಸಿಕ ರೋಗಿಯೆಂದು ತೋರಿಸಲು ಪ್ರಯತ್ನಿಸಿದ್ದನು; ಆದರೆ ಅದು ಸಿದ್ಧವಾಗಲಿಲ್ಲ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲಿನ ಯಾವುದೇ ರೀತಿಯ ದಾಳಿಗಾಗಿ ಅಥವಾ ಅವಮಾನಕ್ಕಾಗಿ ಇಂತಹ ಶಿಕ್ಷೆಯಾದರೆ ಮಾತ್ರ ಇತರರಲ್ಲಿ ಭಯ ಉಂಟಾಗಿ ಇಂತಹ ಘಟನೆಗಳು ಕಡಿಮೆಯಾಗಬಹುದು !