ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪು ಇವರಿಗೆ ಜೀವಾವಧಿ ಶಿಕ್ಷೆ

ಮಹಿಳೆಯ ಲೈಂಗಿಕ ಶೋಷಣೆಯ ಪ್ರಕರಣ

ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪು

ಗಾಂಧಿನಗರ (ಗುಜರಾತ) – ಓರ್ವ ಮಹಿಳೆಯ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪು ಇವರಿಗೆ ಗಾಂಧಿನಗರದಲ್ಲಿನ ಸೆಶನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ೧೦ ವರ್ಷಗಳಿಂದ ಬಾಪು ಜೋದಪುರದ ಕಾರಾಗೃಹದಲ್ಲಿದ್ದಾರೆ. ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಅವರು ಅಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

೨೦೧೩ ರಲ್ಲಿ ಈ ಪ್ರಕರಣದಲ್ಲಿ ಸೆಶನ್ಸ್ ನ್ಯಾಯಾಲಯವು ಪೂಜ್ಯ ಬಾಪು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಮಹಿಳೆ ೨೦೦೧ ರಿಂದ ೨೦೦೬ ವರೆಗೆ ಪೂಜ್ಯ ಬಾಪು ಇವರ ಕರ್ಣಾವತಿ ಇಲ್ಲಿಯ ಆಶ್ರಮದಲ್ಲಿ ವಾಸವಾಗಿದ್ದಾಗ ಪೂಜ್ಯ ಬಾಪು ಇವರು ಅನೇಕ ಸಲ ಆಕೆಯ ಲೈಂಗಿಕ ಶೋಷಣೆ ಮಾಡಿರುವ ಆರೋಪ ಇದೆ. ಈ ಅಪರಾಧದಲ್ಲಿನ ಇತರ ಆರು ಜನರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದರಲ್ಲಿ ಪೂಜ್ಯ ಬಾಪು ಇವರ ಪತ್ನಿ ಲಕ್ಷ್ಮಿ ಬೇನ್, ಅವರ ಮಗಳು ಹಾಗೂ ೪ ಶಿಷ್ಯರು ಒಳಗೊಂಡಿದ್ದಾರೆ.