ಬಿಬಿಸಿಯು ಮಾಹಿತಿಯುದ್ಧ ನಡೆಸುತ್ತಿದೆ ! – ರಷ್ಯಾ

ಬಿಬಿಸಿ ನ್ಯೂಸ್ ನ ವಿವಾದಿತ ಸಾಕ್ಷ್ಯಚಿತ್ರದ ಬಗ್ಗೆ ರಷ್ಯಾದಿಂದಲೂ ಟೀಕೆ

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಝಾಖಾರೋವ

ಮಾಸ್ಕೋ (ರಷ್ಯಾ) – ‘ಬಿಬಿಸಿ ನ್ಯೂಸ್’ ನಿರ್ಮಿಸಿದ ವಿವಾದಿತ ಸಾಕ್ಷ್ಯಚಿತ್ರವು ೨೦೦೨ ರಲ್ಲಿ ಗುಜರಾತನಲ್ಲಿ ನಡೆದಿದ್ದ ಗಲಭೆಯ ಬಗ್ಗೆ ಅಂದಿನ ಮುಖ್ಯಮಂತ್ರಿ ಮತ್ತು ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದೆ. ಇದಕ್ಕೆ ಬಿಬಿಸಿಗೆ ವಿರೋಧ ವ್ಯಕ್ತ ವಾಗುತ್ತಿದೆ. ಭಾರತವು ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಈ ಸಾಕ್ಷ್ಯಚಿತ್ರದ ಬಗ್ಗೆ ರಷ್ಯಾದಿಂದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಬಿಬಿಸಿಯಿದ ಮಾಹಿತಿಯುದ್ಧ ನಡೆಸುತ್ತಿದೆ ಎಂದು ಆರೋಪಿಸಿದೆ. ಈ ಹಿಂದೆ ಅಮೆರಿಕ ಮತ್ತು ಬ್ರಿಟನ್ ಇವರು ಕೂಡ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದರು.

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಝಾಖಾರೋವ ಇವರಿಗೆ ಈ ಸಾಕ್ಷ್ಯಚಿತ್ರದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು, ನಮ್ಮ ಭಾರತೀಯ ಸ್ನೇಹಿತರು ಇದರ ಬಗ್ಗೆ ಮೊದಲೇ ಹೇಳಿಕೆ ನೀಡಿದ್ದಾರೆ. ಬಿಬಿಸಿ ವಿವಿಧ ರೀತಿಯಲ್ಲಿ ಮಾಹಿತಿಯುದ್ಧ ನಡೆಸುತ್ತಿದ್ದು ಇದು ಅದರ ಒಂದು ಸಾಕ್ಷಿಯಾಗಿದೆ. ಇದು ಕೇವಲ ರಷ್ಯಾದ ವಿರುದ್ಧ ಅಲ್ಲ, ಸ್ವತಂತ್ರ ನೀತಿ ಪಾಲಿಸುವವರ ಇತರ ಜಾಗತೀಕ ಶಕ್ತಿ ಕೇಂದ್ರದ ವಿರುದ್ಧ ಇದೆ. ಬಿಬಿಸಿ ಅನೇಕ ಸಲ ಪತ್ರಿಕೋದ್ಯಮದ ಮೂಲಭೂತ ನಿಯಮ ದುರ್ಲಕ್ಷಿಸುತ್ತಿದೆ ಎಂದು ಹೇಳಿದರು.