ಕೆನಡಾದ ಪ್ರಸಿದ್ಧ ಗೌರೀಶಂಕರ ದೇವಸ್ಥಾನ ಧ್ವಂಸ

ಭಾರತ ವಿರೋಧಿ ಘೋಷಣೆ ಬರಹ

ಬೆಂಪ್ಟನ್ (ಕೆನಡಾ) – ಇಲ್ಲಿಯ ಪ್ರಸಿದ್ಧ ಗೌರೀಶಂಕರ ದೇವಸ್ಥಾನದ ಧ್ವಂಸ ಮಾಡಿ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆ ಬರೆದಿರುವ ಘಟನೆ ನಡೆದಿದೆ. ಈ ಘಟನೆಯನ್ನು ವಿರೋಧಿಸುತ್ತಾ ಕೆನಡಾದಲ್ಲಿನ ಟೊರೆಂಟ್ ಇಲ್ಲಿಯ ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯಿಂದ ಮನವಿಯ ಮೂಲಕ ಪ್ರತಿಭಟಿಸಿದೆ. ಇದರಲ್ಲಿ, ದೇವಸ್ಥಾನವನ್ನು ಧ್ವಂಸ ಮಾಡಿದ್ದರಿಂದ ಕೆನಡಾದಲ್ಲಿನ ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ನಾವು ಕೆನಡಾ ಸರಕಾರದ ಅಧಿಕಾರಿಗಳ ಬಳಿ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ.

೧. ಕೆನಡಾದಲ್ಲಿ ಕಳೆದ ವರ್ಷ ಜುಲೈನಲ್ಲಿಯೂ ಒಂದು ದೇವಸ್ಥಾನದ ಮೇಲೆ ದಾಳಿ ನಡೆದಿತ್ತು. ಆ ಸಮಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯದಿಂದ ಕೆನಡಾ ಸರಕಾರದ ಬಳಿ ಈ ರೀತಿಯ ಘಟನೆಯ ಯೋಗ್ಯ ರೀತಿಯಲ್ಲಿ ವಿಚಾರಣೆ ನಡೆಸಲು ಆಗ್ರಹಿಸಿದ್ದರು. ಕೆನಡಾದಲ್ಲಿ ಭಾರತೀಯ ಮೂಲದ ಶೇ. ೪ ರಷ್ಟು ನಾಗರೀಕರು ವಾಸವಾಗಿದ್ದಾರೆ.

೨. ಕೆನಡಾದ ರಾಷ್ಟ್ರೀಯ ಅಂಕಿ ಅಂಶಗಳ ಕಾರ್ಯಾಲಯದ ವರದಿಯ ಪ್ರಕಾರ ಕೆನಡಾದಲ್ಲಿ ೨೦೧೯ ರಿಂದ ೨೦೨೧ ಈ ಕಾಲಾವಧಿಯಲ್ಲಿ ಧರ್ಮ, ಲಿಂಗ ಮತ್ತು ವರ್ಣ ದ್ವೇಷದ ಅಪರಾಧದಲ್ಲಿ ಶೇ. ೭೨ ರಷ್ಟು ಹೆಚ್ಚಳವಾಗಿದೆ. ಆದ್ದರಿಂದ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವಿದೆ. (ಇದರ ಬಗ್ಗೆ ಅಮೇರಿಕಾ ಮತ್ತು ಯುರೋಪಿಯನ್ ದೇಶಗಳು ಮಾತನಾಡುವುದಿಲ್ಲ; ಆದರೆ ಇದರ ಬಗ್ಗೆ ಭಾರತದ ಬಗ್ಗೆ ಸುಳ್ಳು ಆರೋಪ ಮಾಡಿ ಟೇಕಿಸುವರು ! – ಸಂಪಾದಕರು)

ಸಂಪಾದಕೀಯ ನಿಲುವು

ಕೆನಡಾದಲ್ಲಿ ಇಲ್ಲಿಯವರೆಗೆ ಖಲಿಸ್ತಾನಿಗಳ ಚಟುವಟಿಕೆ ನೋಡಿದರೆ ಅವರಿಂದ ಈ ದಾಳಿ ನಡೆದಿರುವುದು ನಿರಾಕರಿಸಲಾಗದು ! ಕೆನಡಾ ಸರಕಾರ ಕೂಡ ಅವರಿಗೆ ತೆರೆ ಮರೆಯಲ್ಲಿ ಬೆಂಬಲ ನೀಡುವುದರಿಂದ ಈ ರೀತಿಯ ಘಟನೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಭಾರತ ಸರಕಾರ ಈಗ ವಿಶೇಷ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !