ಸ್ವಾಮಿ ಪ್ರಸಾದ ಮೌರ್ಯ ಇವರ ಶಿರಚ್ಛೇದ ಮಾಡುವರಿಗೆ ೨೧ ಲಕ್ಷ ರೂಪಯಿ ನೀಡುವೆವು !

ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜು ದಾಸ ಇವರ ಘೋಷಣೆ !

ಮಹಂತ ರಾಜು ದಾಸ

ಅಯೋಧ್ಯ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಓಬಿಸಿ ಮಹಾಸಂಘದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರು ಶ್ರೀರಾಮಚರಿತಮಾನಸ ನಿಷೇಧಿಸಲು ಒತ್ತಾಯಿಸಿದ ನಂತರ ಇಲ್ಲಿಯ ಹನುಮಾನ್ ಗಢಿಯ ಮಹಂತ ರಾಜು ದಾಸ್ ಇವರು ಟಿಕಿಸುತ್ತಾ ಮೌರ್ಯ ಇವರ ಶಿರಚ್ಛೇದ ಮಾಡುವರಿಗೆ ೨೧ ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದರು ಹಾಗೂ ಅವರು ‘ಶ್ರೀರಾಮಚರಿತಮಾನಸದ ಪ್ರತಿಗಳನ್ನು ಸುಟ್ಟು ಹಾಕಿರುವವರ ಮೇಲೆ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.’ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದೆ ಇದ್ದರೆ ಹಿಂದು ಸಮಾಜವು ತಮ್ಮ ಶ್ರದ್ಧಾ ಸ್ಥಾನಗಳ ರಕ್ಷಣೆಗಾಗಿ ಸ್ವತಃ ಕ್ರಮ ಕೈಗೊಳ್ಳುವರು’, ಎಂದು ಮಹಂತ ರಾಜು ದಾಸ ಹೇಳಿದರು.

ಮಹಂತ ರಾಜು ದಾಸ ಇವರು ಮಾತನ್ನು ಮುಂದುವರೆಸುತ್ತಾ, ಸಮಾಜವಾದಿ ಪಕ್ಷದ ಪ್ರಮುಖ ಅಖಿಲೇಶ ಯಾದವ ಇವರು, ಅವರು ಎಂದೂ ಯಾರ ಧರ್ಮದ ಅವಮಾನ ಮಾಡುವುದಿಲ್ಲ ಎಂದು ಹೇಳುತ್ತಾರೆ; ಆದರೆ ಅವರ ಮಾತಿನಲ್ಲಿ ಮತ್ತು ಕೃತಿಯಲ್ಲಿ ಸಾಮ್ಯತೆ ಇಲ್ಲ. ಅವರು ಸ್ವಾಮಿ ಪ್ರಸಾದ್ ಮೌರ್ಯ ಇವರಿಗೆ ಪದೋನ್ನತಿ ನೀಡಿ ಕಾರ್ಯದರ್ಶಿ ಮಾಡಿದ್ದಾರೆ. ಅವರು ಸಾಧು-ಸಂತರಲ್ಲಿ ಆಕ್ರೋಶಗೊಂಡಿದ್ದರಿಂದ ಸರಕಾರ ಮೌರ್ಯ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.