ಓರಿಸ್ಸಾದ ಆರೋಗ್ಯ ಸಚಿವರ ಮೇಲೆ ಅಂಗರಕ್ಷಕ ಪೊಲೀಸನಿಂದ ಗುಂಡು ಹಾರಿಸಿ ಹತ್ಯೆ

ಓಡಿಸಾದ ಆರೋಗ್ಯ ಸಚಿವ ನಬ ದಾಸ

ಬ್ರಜರಾಜನಗರ (ಓರಿಸ್ಸಾ) – ಇಲ್ಲಿಯ ಗಾಂಧೀವೃತ್ತದಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದ ಸಮಯದಲ್ಲಿ ಓಡಿಸಾದ ಆರೋಗ್ಯ ಸಚಿವ ನಬ ದಾಸ ಇವರ ಮೇಲೆ ಅವರ ಅಂಗರಕ್ಷಕ ಸಹಾಯಕ ಪೊಲೀಸ ಅಧಿಕಾರಿ ಗೋಪಾಲ ದಾಸ ಇವರು ಎದೆಗೆ ಗುಂಡು ಹಾರಿಸಿದರು. ಅದರಿಂದ ದಾಸ ಗಂಭೀರವಾಗಿ ಗಾಯಗೊಂಡರು. ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ಭುವನೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ದಾಸ ಇವರ ಎದೆಗೆ ೪-೫ ಗುಂಡು ತಾಗಿರುವುದು ತಿಳಿದುಬಂದಿದೆ.  ಇಲ್ಲಿಯವರೆಗೆ ಈ ಗುಂಡಿನ ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಗೋಪಾಲ ದಾಸ ಇವರನ್ನು ಬಂಧಿಸಿದ್ದಾರೆ.