ಸನಾತನ ಧರ್ಮ ಇದು ಭಾರತದ ರಾಷ್ಟ್ರೀಯ ಧರ್ಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಜಾಲೌರ (ರಾಜಸ್ಥಾನ) – ನಮ್ಮ ಸನಾತನ ಧರ್ಮ ಇದೇ ಭಾರತದ ರಾಷ್ಟ್ರೀಯ ಧರ್ಮವಾಗಿದೆ. ನಾವೆಲ್ಲರೂ ನಮ್ಮ ಸ್ವಾರ್ಥ ಬಿಟ್ಟು ಮುಂದೆ ಹೋಗಿ ಈ ರಾಷ್ಟ್ರೀಯ ಧರ್ಮಕ್ಕೆ ಸೇರಿದರ ಮಾತ್ರ ನಮ್ಮ ದೇಶ ಸುರಕ್ಷಿತವಾಗುವುದು. ನಮ್ಮ ಘನತೆ ಪುನರ್ಸ್ಥಾಪನೆ ಆಗುವುದು ಮತ್ತು ಗೊಬ್ರಹ್ಮಣರ ರಕ್ಷಣೆ ಆಗುವುದು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಇಲ್ಲಿನ ಭೀನಮಾಲಾದಲ್ಲಿನ ಐತಿಹಾಸಿಕ ನೀಲಕಂಠ ಮಹಾದೇವ ದೇವಸ್ಥಾನದ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, ಈ ರೀತಿಯ ಧಾರ್ಮಿಕ ಕಾರ್ಯಕ್ರಮದ ಆಯೋಜನೆಯಲ್ಲಿ ಜಾತಿ, ಪಂಥ ಮತ್ತು ಧರ್ಮ ಬಿಟ್ಟು ನಮಗೆ ಒಗ್ಗಟ್ಟು ನೋಡಲು ಸಿಗುತ್ತದೆ. ಇದೇ ಒಗ್ಗಟ್ಟು ನಿತ್ಯ ಜೀವನದಲ್ಲಿ ಇಟ್ಟುಕೊಳ್ಳಬೇಕು.

ಈ ಹೇಳಿಕೆಯಿಂದ ಇತರ ಧರ್ಮಗಳು ಕೊನೆಗೊಂಡಿತು ! – (ಅಂತೆ) ಕಾಂಗ್ರೆಸ್ಸಿನ ಮುಖಂಡ ಉದಿತ ರಾಜ

ಕಾಂಗ್ರೆಸ್ಸಿನ ಮುಖಂಡ ಉದಿತ ರಾಜ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಹೇಳಿಕೆಯ ಬಗ್ಗೆ ಕಾಂಗ್ರೆಸ್ಸಿನ ಮುಖಂಡ ಉದಿತ ರಾಜ ಇವರು ಟೀಕೆಸಿದ್ದಾರೆ. ಅವರು, ನನಗೆ ಕೆಲವು ಪರಿಚಯದ ಬೌದ್ಧ ಧರ್ಮದ ಸಹಕಾರಿಗಳ ಕರೆ ಬಂದಿತ್ತು, ಅವರು ಸನಾತನ ಧರ್ಮ ರಾಷ್ಟ್ರೀಯ ಧರ್ಮವಾದರೆ ಆಗ ನಮ್ಮ ಗತಿ ಏನು ? ಸನಾತನ ಧರ್ಮದ ಅಸ್ತಿತ್ವಕ್ಕೆ ಯಾರು ನಿರಾಕರಿಸುತ್ತಾರೆ ? ಎಂದು ಹೇಳಿದರು. ನಾನು ಯೋಚನೆ ಮಾಡಿದೆ, ಯೋಗಿಜಿ ಅವರಿಗೆ, ‘ಇತರ ಧರ್ಮ ಇದೆಯಾ ಅಥವಾ ಇಲ್ಲ ? ಎಂದು ಕೇಳಬೇಕು. ಬೌದ್ಧಿಕ ವಿಚಾರ ಆಗಬೇಕು. ಅವರ ಹೇಳಿಕೆಯ ಅರ್ಥ ಹೀಗೆ ಇರುವುದು, ಸಿಖ್, ಜೈನ್, ಬೌದ್ಧ, ಕ್ರೈಸ್ತ, ಇಸ್ಲಾಮಿನ ಜೊತೆ ಇತರ ಧರ್ಮ ನಾಶವಾಗಿದೆ. ಅವರು ಮೊದಲು ‘ಸನಾತನ ಧರ್ಮ’ದಲ್ಲಿನ ಮಹಿಳೆ, ದಲಿತರು ಮತ್ತು ಹಿಂದುಳಿದವರಿಗೆ ಅವರ ಸ್ಥಾನ ಏನು ?’ ಇದನ್ನು ಹೇಳಬೇಕು ಮತ್ತು ನಂತರ ಮುಂದಿನ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶದಲ್ಲಿ ಇಸ್ಲಾಮಿನಿಂದ ಹೇಗೆ ಇತರ ಧರ್ಮಗಳು ನಾಶ ಗೊಳಿಸಿದ್ದಾರೆ ಮತ್ತು ಗೊಳಿಸುತ್ತಿದ್ದಾರೆ, ಹಾಗೆ ಭಾರತದ ಬಹುಸಂಖ್ಯಾತ ಹಿಂದೂಗಳಿಂದ ಈ ಹಿಂದೆ ಕೂಡ ಎಂದು ನಡೆದಿಲ್ಲ ಮತ್ತು ಮುಂದೆಯೂ ನಡೆಯುವ ಸಾಧ್ಯತೆ ಇಲ್ಲ. ಇದು ಕಾಂಗ್ರೆಸ್ಸಿನವರಿಗೆ ತಿಳಿದಿದೆ; ಆದರೆ ಇತರ ಧರ್ಮದ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಅಭ್ಯಾಸವಾಗಿದೆ, ಇದು ಹಿಂದುಗಳಿಗೂ ತಿಳಿದಿದೆ !