ಜಗತ್ತಿನಾದ್ಯಂತ ಅನೇಕ ದೇಶಗಳಿಂದ ಭಾರತಕ್ಕೆ ಗಣರಾಜ್ಯೋತ್ಸವಕ್ಕೆ ಶುಭಾಶಯಗಳು

ಕ್ಯಾನಬೇರಾ (ಆಸ್ಟ್ರೇಲಿಯಾ) – ಭಾರತದ ಗಣರಾಜ್ಯೋತ್ಸವದ ಪ್ರಯುಕ್ತ ಜಗತ್ತಿನ ಮುಖಂಡರು ಶುಭಾಶಯ ನೀಡಿದರು. ಅಮೇರಿಕಾದ ವಿದೇಶಾಂಗ ಸಚಿವ ಆಟನಿ ಬ್ಲಿಂಕನ್ ಭಾರತಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಶುಭಾಶಯ ನೀಡುವಾಗ, ”ಭಾರತ ಮತ್ತು ಅಮೆರಿಕ ಇವರಲ್ಲಿನ ಪಾಲುದಾರಿಕೆ ಇದು ಜಗತ್ತಿನ ಎಲ್ಲಕ್ಕಿಂತ ಉತ್ಪಾದನೆ ಪಾಲುದಾರಿಕೆಯಲ್ಲಿ ಒಂದಾಗಿದೆ.” ಎಂದು ಹೇಳಿದರು.

ಭಾರತದಲ್ಲಿನ ಅಮೆರಿಕಾದ ರಾಯಭಾರಿ ಕಚೇರಿಯಿಂದ ವಿಡಿಯೋ ತಯಾರಿಸಿ ಅಭಿನಂದಿಸಿದೆ. ಈ ವಿಡಿಯೋದಲ್ಲಿ ರಾಘವನ್ ಮತ್ತು ಸ್ಟೇಫನಿ ಇವರಿಬ್ಬರು ಅಮೇರಿಕಾದ ಅಧಿಕಾರಿ ಭಾರತೀಯ ಗಾಯಕಿ ಪವಿತ್ರಾ ಚಾರಿ ಇವರ ಜೊತೆಗೆ ‘ಒಂದೇ ಮಾತರಂ’ ಹಾಡುತ್ತಿರುವುದು ಕಂಡು ಬರುತ್ತದೆ.

ಆಸ್ಟ್ರೇಲಿಯಾದಲ್ಲಿನ ನಾಗರೀಕರು ಮತ್ತು ಇಲ್ಲಿ ವಾಸವಾಗಿರುವ ಭಾರತೀಯರು ಇವರಿಗೆ ಒಟ್ಟಾಗಿ ಸೇರುವ ಅವಕಾಶ ! – ಆಸ್ಟ್ರೇಲಿಯಾದ ಪ್ರಧಾನಮಂತ್ರಿ

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅಥನಿ ಅಲ್ಬಾನಿಜ್ ಇವರು ಕೂಡ ಭಾರತಕ್ಕೆ ಶುಭಾಶಯ ನೀಡಿದರು. ಅವರು, ”ಈ ದಿನ ಭಾರತದ ಸಂಸ್ಕೃತಿ ಮತ್ತು ಕರ್ತೃತ್ವದ ಹೆಮ್ಮೆಯ ಕ್ಷಣವಾಗಿದೆ. ಆಸ್ಟ್ರೇಲಿಯಾದ ನಾಗರಿಕರಿಗೆ ಮತ್ತು ಇಲ್ಲಿ ವಾಸಿಸುವ ಭಾರತೀಯರಿಗೆ ಒಟ್ಟಾಗಿ ಸೇರುವ ಅವಕಾಶ ಇದಾಗಿದೆ. ನಾನು ಎಲ್ಲರಿಗೂ ಶುಭಾಶಯ ನೀಡುತ್ತೇನೆ. ಎಂದು ಹೇಳಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಜೀವಿತ ! – ಮಾಲದೀವನ ವಿದೇಶಾಂಗ ಸಚಿವ

ಮಾಲದೀವದ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಇವರು, ಭಾರತದಲ್ಲಿ ಪ್ರಜಾಪ್ರಭುತ್ವ ಕೇವಲ ಜೀವಿತ ಅಷ್ಟೇ ಅಲ್ಲದೆ ಅದು ಪ್ರಗತಿಪಥದಲ್ಲಿದೆ. ನಾವು ಭಾರತಕ್ಕೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಶುಭಾಶಯ ನೀಡುತ್ತೇವೆ” ಎಂದು ಹೇಳಿದರು.