ಶೀಘ್ರದಲ್ಲೇ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ಅದರ ಮೂರು ಭಾಗ ಭಾರತದಲ್ಲಿ ವಿಲೀನ ! – ಯೋಗ ಗುರು ರಾಮದೇವ ಬಾಬಾ

ಯೋಗ ಗುರು ರಾಮದೇವ ಬಾಬಾ

ಹರಿದ್ವಾರ (ಉತ್ತರಾಖಂಡ) – ಶೀಘ್ರದಲ್ಲೇ ಪಾಕಿಸ್ತಾನವು ನಾಲ್ಕು ಭಾಗ ಆಗಲಿದೆ. ಬಲೂಚಿಸ್ತಾನ ಬೇರೆ ದೇಶವಾಗುವುದು ಹಾಗೂ ಸಿಂಧ, ಪಂಜಾಬ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇವುಗಳು ಭಾರತದಲ್ಲಿ ವಿಲೀನವಾಗುವುದು. ಬರುವ ಕಾಲದಲ್ಲಿ ಭಾರತ ಒಂದು ಮಹಾಶಕ್ತಿಯ ರೂಪದಲ್ಲಿ ಉದಯಿಸುವುದು, ಎಂದು ಯೋಗ ಗುರು ರಾಮದೇವ ಬಾಬಾ ಇವರು ಹೇಳಿದರು. ಅವರು ಪತಂಜಲಿ ಯೋಗಪೀಠದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ಉದ್ದೇಶಿಸಿ ಮಾತನಾಡುತ್ತಿದ್ದರು.

(ಸೌಜನ್ಯ : Zee 24 Kalak)

ಸನಾತನದ ಮೇಲಿನ ದಾಳಿ ಸಹಿಸಲಾಗದು !

ಯೋಗ ಗುರು ರಾಮದೇವ ಬಾಬಾ ಇವರು ಮಾತು ಮುಂದುವರೆಸುತ್ತಾ, ಇತ್ತೀಚಿಗೆ ಸನಾತನ ಧರ್ಮದ ಮೇಲೆ ಸತತವಾಗಿ ದಾಳಿ ನಡೆಯುತ್ತಿದೆ. ರಾಮಾಯಣ, ಶ್ರೀಮದ್ ಭಗವದ್ಗೀತೆ, ವೇದ ಮತ್ತು ಉಪನಿಷತ್ತುಗಳನ್ನು ಅವಮಾನ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದೆಲ್ಲಾ ಅಂತರಾಷ್ಟ್ರೀಯ ಷಡ್ಯಂತ್ರದ ಮೂಲಕ ನಡೆಯುತ್ತಿದೆ. ಸನಾತನದ ವಿರೋಧದಲ್ಲಿ ನಡೆಯುತ್ತಿರುವ ಅಪಪ್ರಚಾರ ನಾವು ಸಹಿಸುವುದೇ ಇಲ್ಲ.

ಸನಾತನ ಧರ್ಮಕ್ಕೆ ಕೀಳಾಗಿ ತೋರಿಸಲು ದೇಶದಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸನಾತನ ಧರ್ಮದ ಮೇಲೆ ಒಮ್ಮೆ, ನಮ್ಮ ಮಹಾಪುರುಷರ ಚರಿತ್ರೆಗಳ ಮೇಲೆ ಒಮ್ಮೆ, ಈ ರೀತಿಯಾಗಿ ಒಂದೊಂದು ಕಪ್ಪು ಚುಕ್ಕೆ ಹಚ್ಚುತ್ತಾರೆ. ಇದನ್ನು ಯಾರು ಮಾಡುತ್ತಾರೆ ಅವರು ರಾಷ್ಟ್ರ ವಿರೋಧಿಯಾಗಿರುವರು. ಇದೆಲ್ಲಾ ವಿದೇಶಿ ಶಕ್ತಿಯ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಹೇಳಿದರು.