ಪತ್ನಿಯ ಹತ್ಯೆ ಮಾಡಿ ಪರಾರಿಯಾಗಿರುವ ವ್ಯಕ್ತಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನ !

೨೦೧೩ ರಿಂದ ಭಾರತದಲ್ಲಿ ವಾಸ !

ಬೆಂಗಳೂರು – ಗರ್ಭಿಣಿ ಪತ್ನಿಯ ಹತ್ಯೆ ಮಾಡಿದ ನಾಸೀರ್ ಹುಸೇನ ಈತ ಬಾಂಗ್ಲಾದೇಶಿ ನುಸುಳುಕೋರನೆಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ೬ ತಿಂಗಳ ಹಿಂದೆಯೇ ಆತ ನಾಝ್ ಖಾನಮ್ ಇವಳೊಂದಿಗೆ ವಿವಾಹವಾಗಿದ್ದನು. ಜನವರಿ ೧೫ ರಂದು ಅವನು ೨೨ ವಯಸ್ಸಿನ ನಾಝ್ ಇವಳನ್ನು ಹತ್ಯೆ ಮಾಡಿ ಬಾಂಗ್ಲಾದೇಶಕ್ಕೆ ಪರಾರಿಯಾಗುತ್ತಿರುವಾಗ ಕೋಲಕಾತಾ ಪೊಲೀಸರು ಅವನ್ನು ಬಂಧಿಸಿದ್ದರು. ಆತ ಸಿಲಿಗುಡಿಯ ಮಾರ್ಗದಿಂದ ಬಾಂಗ್ಲಾದೇಶಕ್ಕೆ ಹೋಗುವವನಿದ್ದನು. ಬೆಂಗಳೂರಿನ ಪೊಲೀಸರು ಅವನನ್ನು ಹಿಡಿಯಲು ಬಂಗಾಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಸೀರ್ ೨೦೧೩-೧೪ ರ ಅವಧಿಯಲ್ಲಿ ಭಾರತದೊಳಗೆ ನುಸುಳಿದ್ದನು.

ನಾಝ್ ಇವಳೊಂದಿಗೆ ವಿವಾಹವಾಗುವಾಗ ನಾಸೀರ್ ಅವನು ಬಂಗಾಲದ ನಿವಾಸಿಯೆಂದು ಹೇಳಿದ್ದನು. ಹಾಗು ತಾನು ಒಬ್ಬ ಅನಾಥನು ಎಂದು ಹೇಳಿದ್ದನು. ಪೊಲೀಸರು ಅವನಿಂದ ನಕಲಿ ಆಧಾರಕಾರ್ಡ್, ಗುರುತಿನ ಚೀಟಿ ಹಾಗೂ ಇತರ ದಖಲೆಗಳನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಆತ ಹಾರ್ಡ್‌ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ. ಅವನಲ್ಲಿ ಇದರ ಯಾವುದೇ ಪದವಿ ಇರಲಿಲ್ಲ. ‘ನಾಝ್ ಇವಳಿಗೆ ಅವಳ ಸಹೋದರಿಯ ಪತಿಯೊಂದಿಗೆ ಅನೈತಿಕ ಸಂಬಂಧವಿತ್ತು, ಅವಳಿಗಾಗುವ ಮಗು ಕೂಡ ಅವನದ್ದೇ ಆಗಿದೆ’, ಎಂದು ನಾಸಿರ್‌ಗೆ ಸಂಶಯವಿತ್ತು. ಆದ್ದರಿಂದಲೇ ಅವನು ನಾಝ್‌ಗೆ ಗರ್ಭಪಾತ ಮಾಡಲು ಹೇಳಿದ್ದನು. ಅವಳು ನಿರಾಕರಿಸಿದಾಗ ಹತ್ಯೆ ಮಾಡಿದನು.

ಕಳೆದ ೯ ವರ್ಷಗಳಿಂದ ಓರ್ವ ನುಸುಳುಕೋರ ಭಾರತದೊಳಗೆ ನುಗ್ಗಿ ನಿರಾಯಾಸವಾಗಿ ವಾಸಿಸುತ್ತಾನೆ, ನೌಕರಿ ಮಾಡುತ್ತಾನೆ, ವಿವಾಹವಾಗುತ್ತಾನೆ. ಆದರೂ ಭಾರತೀಯ ಸುರಕ್ಷಾ ವ್ಯವಸ್ಥೆಗೆ ಅದರ ಸುಳಿವು ಸಿಗುವುದಿಲ್ಲ, ಇದು ನಾಚಿಕೆಗೇಡು ! ಇಂತಹ ಲಕ್ಷಗಟ್ಟಲೆ ನಾಸೀರ್ ದೇಶದಲ್ಲಿರಬಹುದೆಂಬುದು ಇದರಿಂದ ಸ್ಪಷ್ಟವಾಗುತ್ತದೆ !