‘ಪಠಾಣ್’ ಚಿತ್ರಕ್ಕೆ ದೇಶದಾದ್ಯಂತ ವಿರೋಧ !

  • ಇಂದೂರ್‌ನಲ್ಲಿ ಚಲನಚಿತ್ರ ಬಂದ್

  • ಚಿತ್ರಮಂದಿರದ ಮೇಲಿನ ಕರ ಪತ್ರ ಮತ್ತು ಫಲಕವನ್ನು ಹರಿದರು !

  • ಅನೇಕ ಸ್ಥಳಗಳಲ್ಲಿ ಚಿತ್ರಮಂದಿರಗಳ ಹೊರಗೆ ಪ್ರತಿಭಟನೆ

ನವದೆಹಲಿ : ದೇಶಾದ್ಯಂತ ‘ಪಠಾಣ್’ ಚಲನಚಿತ್ರ ಬಿಡುಗಡೆಯಾದ ನಂತರ, ಅನೇಕ ನಗರಗಳಲ್ಲಿ ಇದನ್ನು ವಿರೋಧಿಸಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಬಂಗಾಳ ಮುಂತಾದ ಕೆಲವು ನಗರಗಳಲ್ಲಿ ಚಿತ್ರಮಂದಿರಗಳ ಹೊರಗೆ ಪ್ರತಿಭಟನೆ ಸೇರಿದಂತೆ ಚಲನಚಿತ್ರಗಳನ್ನು ಸಹ ನಿಲ್ಲಿಸಲಾಗಿದೆ. ಹಾಗೂ ಚಲನಚಿತ್ರದ ಪೋಸ್ಟರ್‌ಗಳನ್ನು ಮತ್ತು ಫಲಕಗಳನ್ನು ಹರಿದುಹಾಕಿದ ಘಟನೆಗಳೂ ನಡೆದಿವೆ.

೧. ಮಧ್ಯಪ್ರದೇಶದ ಇಂದೋರ್ ಸಪನಾ ಸಂಗೀತ ಚಿತ್ರಮಂದಿರದ ಹೊರಗೆ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದ ನಂತರ ಬೆಳಗಿನ ಪ್ರದರ್ಶನವನ್ನು ರದ್ದುಪಡಿಸಲಾಯಿತು. ಚಲನಚಿತ್ರವನ್ನು ರದ್ದುಗೊಳಿಸದಿದ್ದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಕಾರ್ಯಕರ್ತರು ಬೆದರಿಕೆ ಹಾಕಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

೨. ಗ್ವಾಲಿಯರ್ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಬಜರಂಗದಳವು ಬೆದರಿಕೆ ಹಾಕಿದೆ.

೩. ಉತ್ತರ ಪ್ರದೇಶದ ಆಗ್ರಾದಲ್ಲಿ ಜನವರಿ ೨೪ ರಂದು ಹಿಂದೂ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಚಲನಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

೪. ಕಲಬುರ್ಗಿಯಲ್ಲಿ ಚಿತ್ರಮಂದಿರವೊಂದರ ಮೇಲೆ ಕಲ್ಲು ತೂರಾಟ ನಡೆದಿದೆ.