ನೀವು ನನಗೆ ಬೆಂಬಲ ನೀಡಿ, ನಾನು ಹಿಂದೂ ರಾಷ್ಟ್ರ ಮಾಡುವೆ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಂದ ಹಿಂದೂಗಳಿಗೆ ಕರೆ !

ರಾಯಪುರ (ಛತ್ತೀಸ್ ಗಡ) – ನೇತಾಜಿ ಸುಭಾಷಚಂದ್ರ ಬೋಸ ಇವರ ಒಂದು ಘೋಷಣೆ ಇತ್ತು, ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುವೆ. ಇಂದು ನಾನು ಘೋಷಣೆ ಮಾಡುತ್ತೇನೆ, ‘ನೀವು ನನಗೆ ಬೆಂಬಲ ನೀಡಿ, ನಾನು ಹಿಂದೂ ರಾಷ್ಟ್ರ ಮಾಡುವೆ’, ಎಂದು ಇಲ್ಲಿಯ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಜನವರಿ ೨೩ ನೇತಾಜಿ ಸುಭಾಷಚಂದ್ರ ಬೋಸ ಇವರ ಜಯಂತಿಯ ದಿನದಂದು ಅವರ ರಾಯಪುರದ ದರಬಾರಿನಲ್ಲಿ ಘೋಷಣೆ ಮಾಡಿದರು. ಇನ್ನು ಈ ಘೋಷಣೆ ನೀವು ಸಮಾಜದಲ್ಲಿ ಹಬ್ಬಿಸಿ, ಎಂದು ಅವರು ಕರೆ ನೀಡಿದರು.

ಭಾರತ ಹಿಂದೂ ರಾಷ್ಟ್ರವಾದರೇ, ಹಿಂದೂ ವಿರೋಧಿ ಸಮಸ್ಯೆ ಪರಿಹಾರ ಆಗುವುದು !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಮಾತು ಮುಂದುವರಿಸಿ, ಭಾರತ ಸಂಪೂರ್ಣವಾಗಿ ಹಿಂದೂ ರಾಷ್ಟ್ರವಾಗಿದೆ; ಆದರೆ ಭಾರತಕ್ಕೆ ಸಂಪೂರ್ಣ ಹಿಂದೂ ರಾಷ್ಟ್ರ ಮಾಡುವುದು ಇದು ನಾನು ಇದಕ್ಕಾಗಿ ಹೇಳುತ್ತೇನೆ ಕಾರಣ ಸನಾತನಕ್ಕೆ ನಿರಂತರವಾಗಿ ಗುರಿ ಮಾಡಲಾಗುತ್ತಿದೆ. ನಿರಂತವಾಗಿ ಶ್ರೀರಾಮಚರಿತಮಾನಸದ ವಿರುದ್ಧ ವಿಷಕಾರಲಾಗುತ್ತಿದೆ. ಶ್ರೀರಾಮ ಯಾತ್ರೆಗಳ ಮೇಲೆ ಕಲ್ಲುತೂರಾಟ ಮಾಡಲಾಗುತ್ತದೆ. ಶ್ರೀ ರಾಮ, ಸಂತರ ಮೇಲೆ ಆರೋಪ ಮಾಡುತ್ತಾರೆ. ಆದ್ದರಿಂದ ಭಾರತ ಹಿಂದೂ ರಾಷ್ಟ್ರವಾದರೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ! ಎಂದು ಹೇಳಿದರು.

ಪಂಡಿತ ಧೀರೇಂದ್ರಕೃಷ್ಣ ಶರ್ಮ ಇವರು ನೀಡಿದ ಹೇಳಿಕೆ

೧. ಕೇವಲ ಬಾಗೇಶ್ವರ ಧಾಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ವಿಷಯವಲ್ಲ, ಪ್ರತಿಯೊಂದು ಸನಾತನದವರ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಬಳೆ ಹಾಕಿಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ. ಈಗ ಹೊರ ಬರುವ ಸಮಯ ಬಂದಿದೆ. ಈಗ ನೀವು ಹೊರ ಬರೆದಿದ್ದರೆ ನಾವು ನಿಮ್ಮನ್ನು ಹೇಡಿಗಳ ಎನ್ನುವೆವು.

೨. ಭಾರತದಲ್ಲಿನ ಪ್ರತಿಯೊಂದು ಸಂತರು ನಮ್ಮ ಜೊತೆ ಇದ್ದಾರೆ. ಇದು ನಮ್ಮ ಭಾಗ್ಯವಾಗಿದೆ. ನಾವು ಎಲ್ಲಾ ಸಾಧುಗಳಿಗೆ ಪ್ರಾರ್ಥನೆ ಮಾಡುತ್ತೇವೆ, ಅವರು ಈಗ ಸುಮ್ಮನೆ ಕುಳಿತುಕೊಳ್ಳರಬಾರದು. ಬಾಗೇಶ್ವರ ಧಾಮ ಕೇವಲ ನಿಮಿತ್ತ ಮಾತ್ರವಾಗಿದೆ. ಧರ್ಮವಿರೋಧಕರ ನಿಜವಾದ ಉದ್ದೇಶ ಸನಾತನವಾಗಿದೆ.

೩. ಇದೊಂದು ಚಮತ್ಕಾರವೇ ಆಗಿದೆ, ಭಾರತದ ಹಿಂದೂಗಳು ಸಂಘಟಿತರಾಗಿದ್ದಾರೆ.

೪. ಭಾರತದಲ್ಲಿನ ಪತ್ರಿಕೋದ್ಯಮ ಸತ್ಯ ತೋರಿಸುತ್ತದೆ ಮತ್ತು ಪ್ರಸಾರ ಮಾಧ್ಯಮಗಳು ದರಬಾರನಲ್ಲಿ ಏನು ಸತ್ಯ ಇದೆ ಅದನ್ನೇ ತೋರಿಸಿದ್ದಾರೆ.

ನಾನು ಎಂದು ರಾಜಕೀಯ ಪಕ್ಷಕ್ಕೆ ಹೋಗುವುದಿಲ್ಲ ಮತ್ತು ರಾಜಕೀಯ ಮಾಡುವುದಿಲ್ಲ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಮತ್ತು ಎಂದೂ ರಾಜಕೀಯ ಮಾಡುವುದಿಲ್ಲ. ನಾನು ಕೇವಲ ಸನಾತನದವರನ್ನು ಸಂಘಟಿತಗೊಳಿಸುವ ಕೆಲಸ ಮಾಡುತ್ತೇನೆ ಎಂದು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಗೆ ಜೀವ ಬೆದರಿಕೆ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಗೆ ಜೀವ ಬೆದರಿಕೆ ಇದೆ ಎಂದು ಅವರ ಓರ್ವ ಸಂಬಂಧಿಕರಾಗಿರುವ ಲೋಕೇಶ ಗರ್ಗ ಇವರಿಗೆ ನೀಡಿಲಾಗಿದೆ. ಸಂಚಾರ ವಾಣಿಯ ಮೂಲಕ ಬೆದರಿಕೆ ನೀಡಿದ್ದಾರೆ. ಬೆದರಿಕೆ ನೀಡುವ ವ್ಯಕ್ತಿ ಅಮರ ಸಿಂಹ ಎಂದು ಗರ್ಗ ಹೇಳಿದರು. ಗರ್ಗ ಇವರು ಛತರಪುರ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.