ಸ್ಪೈಸ್ ಜೆಟ್  ವಿಮಾನದಲ್ಲಿ ಗಗನಸಖಿಯ ಜೊತೆ ಅಸಭ್ಯವರ್ತನೆ

ಪ್ರವಾಸಿಯನ್ನು ವಿಮಾನದಿಂದ ಕೆಳಗೆ ಇಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದರು !

ನವದೆಹಲಿ – ದೆಹಲಿಯಿಂದ ಭಾಗ್ಯನಗರಕ್ಕೆ ಹೋಗುವ ಸ್ಪೈಸ್ ಜೆಟ್ ಎಂಬ ವಿಮಾನ ಸೇವೆ ನೀಡುವ ಕಂಪನಿಯ ವಿಮಾನದಲ್ಲಿ ಒಬ್ಬ ಪ್ರವಾಸಿಯು ಗಗನಸಖಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದನು. ಈ ಪ್ರವಾಸಿಯನ್ನು ನಿಲ್ಲಿಸಿದ ನಂತರ ಅವನು ಎಲ್ಲಾ ಸಿಬ್ಬಂದಿಗಳೊಂದಿಗೆ ಜೊತೆಗೆ ಅಸಭ್ಯವಾಗಿ ವರ್ತಿಸಿದನು. ಆದ್ದರಿಂದ ಇತರ ಪ್ರಯಾಣಿಕರನ್ನು ವಿಮಾನದಲ್ಲಿ ಕುಳಿತುಕೊಳ್ಳದಂತೆ ತಡೆಗಟ್ಟಲಾಯಿತು. ಈ ಪ್ರಕರಣ ಉಲ್ಬಣವಾಗುತ್ತಿದ್ದಂತೆ , ಸಿಬ್ಬಂದಿಗಳು ವೈಮಾನಿಕ ನಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಇದರ ಮಾಹಿತಿ ನೀಡಿದರು. ಅದರ ನಂತರ ಅಸಭ್ಯವಾಗಿ ವರ್ತಿಸಿರುವ ವ್ಯಕ್ತಿಯನ್ನು ಮತ್ತು ಅವನ ಜೊತೆ ಇರುವ ಇನ್ನೊಬ್ಬ ಪ್ರವಾಸಿಯನ್ನು ವಿಮಾನದಿಂದ ಕೆಳಗೆ ಇಳಿಸಲಾಯಿತು. ಅವರನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಇಲಾಖೆಗೆ ಒಪ್ಪಿಸಲಾಯಿತು.

(ಸೌಜನ್ಯ :Republic World )