ಪ್ರಧಾನಿ ವಿರೋಧದ ಸಾಕ್ಷ್ಯಚಿತ್ರವನ್ನು ನಿಷೇಧಿಸಲಾಗುತ್ತದೆ; ಆದರೆ ಗೋಡ್ಸೆಯ ಕುರಿತಾದ ಚಲನಚಿತ್ರಕ್ಕೆ ಇಲ್ಲ ! – ಅಸದುದ್ದೀನ್ ಓವೈಸಿ

ಅಸದುದ್ದೀನ್ ಓವೈಸಿ ಇವರ ನಿರರ್ಥಕ ಪ್ರಶ್ನೆ !

ಅಸದುದ್ದೀನ್ ಓವೈಸಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾಗ್ಯನಗರ (ತೆಲಂಗಾಣ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಇರುವಾಗ ನಡೆದಿದ್ದ ಗಲಭೆಯ ಬಗ್ಗೆ ಬಿಬಿಸಿ ನ್ಯೂಸ್ ಸಾಕ್ಷ್ಯಚಿತ್ರ ತಯಾರಿಸಿತ್ತು. ಅದನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈಗ ಮ. ಗಾಂಧಿ ಇವರ ಹತ್ಯೆ ಮಾಡಿರುವ ಗೋಡ್ಸೆ ಕುರಿತು ಚಲನಚಿತ್ರ ನಿರ್ಮಾಣವಾಗಿದೆ. ಅದನ್ನು ಪ್ರಧಾನಮಂತ್ರಿ ನಿಷೇಧಿಸುವರೆ ? ನಾನು ಈ ಚಲನಚಿತ್ರ ನೋಡಿದ್ದೇನೆ. ಅದರಲ್ಲಿ ಗೋಡ್ಸೆಯವರು ಗಾಂಧಿ ಇವರನ್ನು ಏಕೆ ಹತ್ಯೆ ಮಾಡಿದರು, ಅದನ್ನು ಹೇಳುತ್ತಾನೆ. ಮೋದಿ ಅವರ ವಿರೋಧದಲ್ಲಿನ ಸಾಕ್ಷ್ಯಚಿತ್ರದ ಬಗ್ಗೆ ಅಡಚಣೆ ಇದೆ, ಆದರೆ ಗಾಂಧಿಯ ಹತ್ಯೆ ಮಾಡಿರುವ ಚಲನಚಿತ್ರಕ್ಕೆ ಅಡಚಣೆ ಇಲ್ಲ, ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸುದ್ದುದ್ದೀನ್ ಓವೈಸಿ ಇವರು ಟಿಕಿಸಿದ್ದಾರೆ. ಬರುವ ಜನವರಿ ೨೬ ರಂದು ‘ಗಾಂಧಿ-ಗೋಡ್ಸೆ : ಒಂದು ಯುದ್ಧ’ ಈ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಸಂಪಾದಕೀಯ ನಿಲುವು

  • ಯಾವುದು ಅಸತ್ಯವಾಗಿದೆ ಅದನ್ನು ನಿಷೇಧಿಸಲೇಬೇಕು ಮತ್ತು ಯಾವುದು ಸತ್ಯವಾಗಿದೆ ಅದನ್ನು ಜಗತ್ತಿನೆದರೂ ಮಂಡಿಸಲೇಬೇಕು ! ತದ್ವಿರುದ್ಧ ಓವೈಸಿ ಆಗ್ರಹಿಸುತ್ತಿದ್ದರೆ ಅದನ್ನು ಹೇಗೆ ಒಪ್ಪಲು ಸಾಧ್ಯ ?
  • ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ಕೂಡ ಓವೈಸಿ ವಿರೋಧಿಸಿದ್ದರು; ಏಕೆಂದರೆ ಅದು ಹಿಂದೂಗಳ ಸತ್ಯದ ಪರ ವಹಿಸಿತ್ತು, ಇದು ಅರ್ಥಮಾಡಿಕೊಳ್ಳಬೇಕು !