ಭಾರತ ದೇಶ ಶ್ರೇಷ್ಠ ಆಗಬೇಕು, ಎಂದು ಸುಂದರ ಕನಸು ಕಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕನಸು ನನಸಾಗಿಸುವುದು ನಮ್ಮ ಜವಾಬ್ದಾರಿ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಡಾ. ಮೋಹನ್ ಜಿ ಭಾಗವತ

ಕೋಲಕಾತಾ (ಬಂಗಾಳ) – ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು. ಅದು ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ. ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತರು ಪ್ರತಿಪಾದಿಸಿದರು. ನೇತಾಜಿ ಬೋಸ್ ರ ಜಯಂತಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.