ರಾಯಪುರ (ಛತ್ತೀಸ್ ಗಡ) – ನಾನು ಯಾವುದೇ ತಪಸ್ವಿ ಅಥವಾ ಮನದ ಮುಕ್ತಮಾತಿನವನಲ್ಲ. ನಾನು ಗದ್ದುಗೆಯಲ್ಲಿ (ಬಾಗೇಶ್ವರ ಧಾಮ ಪೀಠದ ಸ್ಥಾನ) ಇರುವುದಿಲ್ಲ, ಆಗ ಒಬ್ಬ ಸಾಮಾನ್ಯ ಮನುಷ್ಯ ಆಗಿರುತ್ತೇನೆ; ಆದರೆ ಆ ಗದ್ದುಗೆಯಲ್ಲಿ ಕುಳಿತು ಭಗವಂತ ಬಾಲಾಜಿ ಮತ್ತು ಶ್ರೀ ಹನುಮಂತನ ಸ್ಮರಣೆ ಮಾಡಿದ ನಂತರ ಯಾವ ಆದೇಶ ಸಿಗುತ್ತದೆ, ಅದನ್ನು ನಾನು ಕಾಗದದ ಮೇಲೆ ಬರೆಯುತ್ತೇನೆ. ಜನರು ನನ್ನ ಬಳಿ ಬಂದು ವಿನಂತಿಸುತ್ತಾರೆ. ನಂತರ ನಾನು ನನ್ನ ಗುರುವಿನಿಂದ ಪ್ರೇರಣೆ ಪಡೆದು ಆ ವಿನಂತಿಯ ಬಗ್ಗೆ ಭವಿಷ್ಯವಾಣಿ ಹೇಳುತ್ತೇನೆ. ಅದು ಕಾಗದ ಮೇಲೆ ಬರೆಯುತ್ತೇನೆ, ಎಂದು ಒಂದು ಖಾಸಗಿ ವಾರ್ತಾ ವಾಹಿನಿಯ ಪ್ರತಿನಿಧಿಗೆ ಬಾಗೇಶ್ವರ ಧಾಮ ಪೀಠದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಮಾಹಿತಿ ನೀಡಿದರು.
ನಾಗಪುರ (ಮಹಾರಾಷ್ಟ್ರ)ದ ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನೆ ಸಮಿತಿಯ ಶಾಮ ಮಾನವ ಇವರು ಅವರ ಪವಾಡವನ್ನು ಸಿದ್ಧಪಡಿಸುವಂತೆ ಕರೆ ನೀಡಿದ್ದಾರೆ. ಅದರ ಬಗ್ಗೆ ಅವರ ವಿಚಾರಣೆ ನಡೆಸಿದ ನಂತರ ಅವರು ಈ ಮಾಹಿತಿ ನೀಡಿದರು. ಪಂಡಿತ ಶಾಸ್ತ್ರಿ ಅವರು ಇಲ್ಲಿಯ ದಿವ್ಯ ದರಬಾರಿನಲ್ಲಿ ಜನರ ಸಮಸ್ಯೆಗಳನ್ನು ಕೇಳುತ್ತಾರೆ. ವಿಶೇಷವಾಗಿ ಅವರ ಮನಸ್ಸಿನ ಮಾತು ಹೇಳುವ ಮೊದಲು ಅವರು ಆ ಸಮಸ್ಯೆಗಳನ್ನು ಒಂದು ಕಾಗದದ ಮೇಲೆ ಬರೆದಿರುವುದು ದಾವೆ ಮಾಡುತ್ತಾರೆ, ಹಾಗೂ ಅವರು ಈ ಸಮಸ್ಯೆಯ ಬಗ್ಗೆ ಉಪಾಯ ಕೂಡ ಹೇಳುತ್ತಾರೆ. ಆದ್ದರಿಂದ ಅವರ ಸಮರ್ಥಕರು ಅವರನ್ನು ಸಿದ್ಧ ಪುರುಷರು ಎಂದು ಹೇಳುತ್ತಾರೆ.
ಪಂಡಿತ ಶಾಸ್ತ್ರಿ ಮಾತು ಮುಂದುವರೆಸುತ್ತಾ, ನಾನು ಕೇವಲ ನನ್ನ ಇಷ್ಟ ದೇವತೆಯ ಸಾಧಕನಾಗಿದ್ದೇನೆ. ನನ್ನ ಬಳಿ ಜನ ಸಮಸ್ಯೆಯೊಂದಿಗೆ ಬರುತ್ತಾರೆ. ನಾನು ಕೇವಲ ಅವರ ಸಮಸ್ಯೆಯ ಬಗ್ಗೆ ಉಪಾಯ ಹೇಳುತ್ತೇನೆ. ಅದರ ಆದೇಶ ನನಗೆ ನನ್ನ ಗುರುವಿನಿಂದ ದೊರೆಯುತ್ತದೆ. ಜನರು ಅವರ ಸಮಸ್ಯೆ ಹೇಳುವ ಮೊದಲು ಗುರುಗಳು ನನಗೆ ಏನು ಹೇಳುತ್ತಾರೆ, ಅದನ್ನು ನಾನು ಮೊದಲೇ ಕಾಗದ ಮೇಲೆ ಬರೆದಿರುತ್ತೇನೆ. ಅದರ ನಂತರ ಜನರು ಶ್ರದ್ಧೆಯಿಂದ ಅದೇ ನಮ್ಮ ಸಮಸ್ಯೆ ಎಂದು ಒಪ್ಪುತ್ತಾರೆ. ನಾನು ಕಾಗದದ ಮೇಲೆ ಬರೆದಿರುವ ವಿಷಯ ಸತ್ಯ ಅಥವಾ ಸುಳ್ಳು ? ಇದನ್ನು ನಾನು ಅಲ್ಲ ಜನರೇ ಹೇಳುತ್ತಾರೆ.
#EXCLUSIVE: ‘मैं बाबा नहीं हूं.. ना ही संत हूं.. मैं सिर्फ सनातनी हिंदू हूं.. मैंने जो #Bulldozer चलाने वाला बयान दिया था वो कोई भड़काऊ बयान नहीं है’- बागेश्वर धाम के पीठाधीश्वर #DhirendraShastri @SushantBSinha के सवाल, #DhirendraKrishnaShastri के जवाब#BageshwarDhamBaba pic.twitter.com/0qP1Mgbwj5
— Times Now Navbharat (@TNNavbharat) January 19, 2023
ಮತಾಂತರದ ವಿರುದ್ಧ ಕಾರ್ಯ ಮಾಡುವುದರಿಂದ ನನ್ನ ವಿರುದ್ಧ ಷಡ್ಯಂತ್ರ !
ಪಂಡಿತ ಧೀರೇಂದ್ರ ಶಾಸ್ತ್ರೀ ಇವರು, ನನ್ನ ವಿರುದ್ಧ ಷಡ್ಯಂತ ರೂಪಿಸುವ ಸಾಧ್ಯತೆಯ ಬಗ್ಗೆ ಈ ಮೊದಲೇ ಹೇಳಿದ್ದೇನೆ. ನಾನು ಮತಾಂತರದ ವಿರುದ್ಧ ಅಭಿಯಾನ ನಡೆಸಲು ನಿರ್ಣಯಿಸಿದ್ದೇನೆ. ಅಂದಿನಿಂದ ಈ ಷಡ್ಯಂತ್ರ ನಡೆಯುತ್ತಿದೆ. ನನ್ನ ದರಬಾರಿನಲ್ಲಿ ಅನೇಕ ಜನರು ಭೂತ ಪ್ರೆತದ ಸಮಸ್ಯೆ ಹೇಳುತ್ತಾರೆ. ನಾನು ಮತಾಂತರ ಆಗಿರುವ ಮುಗ್ದ ಜನರಿಗೆ ಸನಾತನ ಧರ್ಮದ ಮಂತ್ರೋಚಾರದಲ್ಲಿ ಈ ಭೂತ ಬಾಧೆ ತೆಗೆಯುವ ಶಕ್ತಿ ಇದೆ ಎಂದು ಹೇಳುತ್ತೇನೆ; ಆದರೆ ಅದಕ್ಕಾಗಿ ‘ನೀವು ಮತ್ತೆ ಹಿಂದೂ ಧರ್ಮಕ್ಕೆ ಹಿಂತಿರುಗುವುದು ಅವಶ್ಯಕವಾಗಿದೆ’, ಎಂದು ಕೂಡ ಸ್ಪಷ್ಟಪಡಿಸುತ್ತೇನೆ.’
ಪಂಡಿತ ಧೀರೇಂದ್ರ ಶಾಸ್ತ್ರಿ ಭಯೋತ್ಪಾದಕ ದಾಳಿಯ ಮಾಹಿತಿ ಮೊದಲೇ ಏಕೆ ನೀಡುವುದಿಲ್ಲ ?
ನೀವು ‘ಕೊರೋನಾ ಮಹಾಮಾರಿ ಬರುವುದು’ ಅಥವಾ ‘ಭಯೋತ್ಪಾದಕ ದಾಳಿ’ ಇದರ ಬಗ್ಗೆ ದೇಶಕ್ಕೆ ಮಾಹಿತಿ ನೀಡಿ ಏಕೆ ಸಹಾಯ ಮಾಡುವುದಿಲ್ಲ ? ಈ ಪ್ರಶ್ನೆಯ ಬಗ್ಗೆ ಉತ್ತರಿಸುವಾಗ, ”ನಾನು ಭವಿಷ್ಯಕಾರನಲ್ಲ ಅಥವಾ ಜ್ಯೋತಿಶಾಚಾರ್ಯನಲ್ಲ; ಆದರೆ ಯಾರೂ ನನ್ನ ದರಬಾರಿಗೆ ಬಂದು ಪ್ರಶ್ನೆ ಕೇಳುತ್ತಾರೆ, ಆಗ ನಾನು ನನ್ನ ಒಳಗಿನ ಪ್ರೇರಣೆ ಮತ್ತು ಅನುಭೂತಿಯ ಆಧಾರದಲ್ಲಿ ಸಮಸ್ಯೆಯ ನಿವಾರಣೆ ಮಾಡುತ್ತೇನೆ. ಯಾವುದಾದರೂ ರಾಜಕೀಯ ವ್ಯಕ್ತಿ ನನ್ನ ಬಳಿ ಬಂದು ರಾಜ್ಯದ ಬಗ್ಗೆ ಪ್ರಶ್ನೆ ಕೇಳಿದರೆ, ಆಗ ನಾನು ಯೋಗ ಯೋಗ ಮತ್ತು ಸಂಭವಿಸುವುದರ ಬಗ್ಗೆ ಹೇಳುತ್ತೇನೆ; ಆದರೆ ಯಾರೇ ನನ್ನ ಬಳಿ ಏನು ಕೇಳದಿದ್ದರೆ ಆಗ ಪ್ರಶ್ನೆಗಳು ಹೇಗೆ ಪರಿಹರಿಸಲು ಸಾಧ್ಯ ? ಎಂದು ಹೇಳಿದರು.