ಆಸ್ಸಾಂ ಮುಖ್ಯಮಂತ್ರಿಗಳು `ಶಾಹರೂಖ ಖಾನ ಪರಿಚಯವಿಲ್ಲ’ ಎಂದು ಹೇಳಿದಾಗ ಖಾನನಿಂದ ಮಧ್ಯರಾತ್ರಿ ಮುಖ್ಯಮಂತ್ರಿಗಳಿಗೆ ದೂರವಾಣಿ !

ಆಸ್ಸಾಂನಲ್ಲಿ ಖಾನನ ಮುಂಬರಲಿರುವ ‘ಪಠಾಣ’ ಚಲನಚಿತ್ರಕ್ಕೆ ಆಗುತ್ತಿರುವ ವಿರೋಧದ ಬಗ್ಗೆ ಗಮನಹರಿಸುವಂತೆ ವಿನಂತಿಸಿದರು !

ನಟ ಶಾಹರೂಖ ಖಾನ ಮತ್ತು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಾಟಿ (ಆಸ್ಸಾಂ) – ಇಲ್ಲಿ ಜನೇವರಿ 21 ರಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ನಟ ಶಾಹರೂಖ ಖಾನರ ಮುಂಬರಲಿರುವ ‘ಪಠಾಣ’ ಚಲನಚಿತ್ರ ನೋಡಲು ಸ್ಪಷ್ಟವಾಗಿ ನಿರಾಕರಿಸಿದರು. ಹಾಗೆಯೇ ಈ ಸಮಯದಲ್ಲಿ ಅವರು ‘ಶಾಹರೂಖ ಖಾನ ಯಾರು? ನನಗೆ ಅವನ ಪರಿಚಯವಿಲ್ಲ. ನನಗೆ ಅವನ ಚಲನಚಿತ್ರದ ವಿಷಯವೂ ತಿಳಿದಿಲ್ಲ’, ಎಂದು ಹೇಳಿದರು. ಈ ಕುರಿತು ಶಾಹರೂಖ ಖಾನ ನನಗೆ ಜನೇವರಿ 21 ರಂದು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ದೂರವಾಣಿ ಕರೆ ಮಾಡಿದರು. ಖಾನಗೆ ಗೌಹಾಟಿಯ ನರೇಂಗಿ ಹಾಲ್ ನಲ್ಲಿ ನಡೆಯಲಿರುವ ‘ಪಠಾಣ’ ಚಲನಚಿತ್ರದ ಪ್ರದರ್ಶನದ ವಿಷಯದಲ್ಲಿ ಚಿಂತೆಯೆನಿಸುತ್ತಿತ್ತು. ನಾನು ಅವರಿಗೆ ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ ಆಗಿದೆಯೆಂದು ಹೇಳಿ ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ಯಾವುದೇ ವಿವಾದಗಳು ಆಗದಂತೆ ಜಾಗೃತೆ ವಹಿಸಲಾಗುವುದು’ ಎಂದು ಆಶ್ವಾಸನೆ ನೀಡಿದ್ದೇನೆಂದು ಜನವರಿ 22 ರಂದು ಮಧ್ಯರಾತ್ರಿ ಟ್ವೀಟ್ ಮಾಡಿ ಹೇಳಿದರು.

ಆಸ್ಸಾಂನ ಅನೇಕ ನಗರಗಳಲ್ಲಿ ‘ಪಠಾಣ’ ಚಲನಚಿತ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ. ಜನವರಿ 20 ರಂದು ನರೇಂಗಿಯ ಒಂದು ಥಿಯೇಟರ್ ಅನ್ನು ಬಜರಂಗ ದಳದ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಅದರಲ್ಲಿ ಶಾಹರೂಖ ಖಾನನ ಭಿತ್ರಿಪತ್ರಗಳನ್ನು ಸುಡಲಾಗಿತ್ತು. ಈ ಚಲನಚಿತ್ರದಲ್ಲಿ ಕೇಸರಿ ಬಣ್ಣದ ಅಪಮಾನ ಮಾಡುವುದಲ್ಲದೇ ಚಲನಚಿತ್ರದಲ್ಲಿ ಅಶ್ಲೀಲತೆಯನ್ನು ತೋರಿಸಲಾಗಿರುವುದರಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಆಸ್ಸಾಂ ಜನರು ಹಿಂದಿ ಅಲ್ಲ, ಆಸ್ಸಾಮಿ ಚಲನಚಿತ್ರವನ್ನು ನೋಡಬೇಕು !

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸರಮಾ ಇವರು ಶಾಹರೂಖ ಖಾನರ ವಿಷಯದಲ್ಲಿ ನೀಡಿದ ಹೇಳಿಕೆಯಿಂದ ಪತ್ರಕರ್ತರು ಶಾಹರೂಖ ಖಾನ ದೊಡ್ಡ ನಟನಾಗಿದ್ದಾನೆಂದು ಹೇಳಿದರು. ಅದಕ್ಕೆ ಸರಮಾ ಇವರು, ”ರಾಜ್ಯದ ಜನರು ಹಿಂದಿಯಲ್ಲ, ಆಸ್ಸಾಮಿ ಚಲನಚಿತ್ರಕ್ಕೆ ಒಲವು ತೋರಿಸಬೇಕು. ದಿವಂಗತ ನಿಪೊನ ಗೋಸ್ವಾಮಿಯವರು ನಿರ್ಮಿಸಿರುವ `ಡಾ. ಬೇಜಬರುಆ-ಪಾರ್ಟ 2’ ಈ ಆಸ್ಸಾಮಿ ಚಲನಚಿತ್ರ ಶೀಘ್ರದಲ್ಲೇ ಪ್ರದರ್ಶನಗೊಳ್ಳಲಿದೆ. ನಾಗರಿಕರು ಅದನ್ನು ತಪ್ಪದೇ ನೋಡಬೇಕು’ ಎಂದು ಕರೆ ನೀಡಿದರು.