ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಬೆಂಬಲಿಸಿ ೫೦ ಸಾವಿರ ಸಾಧು ಸಂತರು ರಸ್ತೆಗಿಳಿಯುವರು !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಸಾಧು-ಸಂತರು ಮತ್ತು ಅರ್ಚಕರ ಸಂಘಟನೆಯಿಂದ ಛತ್ತೀಸ್ ಗಡನ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಬೆಂಬಲವಾಗಿ ಒಂದು ಠರಾವು ಅಂಗಿಕರಿಸಿದೆ. ಅದರಲ್ಲಿ, ಯಾವುದೇ ಸಂಸ್ಥೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಬಗ್ಗೆ ಆರೋಪಿಸುತ್ತಿದ್ದರೇ ಅಥವಾ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದರೆ, ಅದರ ವಿರುದ್ಧ ೫೦ ಸಾವಿರ ಸಾಧು-ಸಂತರು ರಸ್ತೆಗಿಳಿಯುವರು. ಸಂತರು ಮತ್ತು ಅರ್ಚಕರ ಸಂಘಟನೆಯ ಪ್ರದೇಶಾಧ್ಯಕ್ಷ ನರೇಂದ್ರ ದೀಕ್ಷಿತ ಇವರು, ಯಾರಾದರೂ ವೈದಿಕ ಧರ್ಮಾಚರಣೆ ಮಾಡುವ ಮತ್ತು ಪ್ರವಚನಕಾರರ ಅವಮಾನ ಮಾಡುತ್ತಿದ್ದರೆ ಅದು ನಾವು ಸಹಿಸುವುದಿಲ್ಲ, ಎಂದು ಹೇಳಿದರು.