ಅಪ್ರಾಪ್ತರಿಗೆ ಗರ್ಭನಿರೋಧಕಗಳನ್ನು ಮಾರಾಟ ಮಾಡಬಾರದೆಂಬ ಆದೇಶವನ್ನು ಕರ್ನಾಟಕ ಸರಕಾರ ಹಿಂಪಡೆದಿದೆ !

ಬೆಂಗಳೂರು – ರಾಜ್ಯ ಸರಕಾರದ ಔಷಧ ನಿಯಂತ್ರಣ ಇಲಾಖೆಯಿಂದ ೧೮ ವರ್ಷದ ಕೆಳಗಿನ ಹುಡುಗ ಹುಡುಗಿಯರಿಗೆ ಗರ್ಭ ನಿರೋಧಕ ಮಾರಾಟದ ಮೇಲೆ ಹಾಕಿರುವ ನಿಷೇಧವನ್ನು ಹಿಂಪಡೆದಿದೆ. ಕಳೆದ ವರ್ಷ ನವಂಬರದಲ್ಲಿ ಶಾಲೆಯ ವಿದ್ಯಾರ್ಥಿಗಳ ಚೀಲಗಳಲ್ಲಿ ಗರ್ಭನಿರೋಧಕ, ಸಿಗರೇಟ್ ಮತ್ತು ‘ವೈಟ್ ನರ್’ ಸಿಕ್ಕಿದ ನಂತರ ಔಷಧ ನಿಯಂತ್ರಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿತ್ತು. ನಿಷೇಧ ಹಿಂಪಡೆದ ನಂತರ ತಜ್ಞರು ಮತ್ತು ಔಷಧ ಮಾರಾಟಗಾರರು, ಇದರಿಂದ ಬೇಡವಾದ ಗರ್ಭಧಾರಣೆ ಮತ್ತು ಲೈಂಗಿಕ ಸಂಕ್ರಮಣದಲ್ಲಿ ಹೆಚ್ಚಳವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.