ಭಾರತಕ್ಕೆ ಧನ್ಯವಾದ ಹೇಳಿದ ಶ್ರೀಲಂಕಾ !

ಕಷ್ಟ ಕಾಲದಲ್ಲಿ ಶ್ರೀಲಂಕಾಗೆ ಭಾರತದಿಂದ ಬಹಳಷ್ಟು ಆರ್ಥಿಕ ಸಹಾಯ !

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಮತ್ತು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ

ಕೊಲಂಬೋ – ಕಷ್ಟ ಕಾಲದಲ್ಲಿ ಅಗತ್ಯ ವಸ್ತುಗಳ ಆಮದಿಗಾಗಿ ಭಾರತದಿಂದ ದೊರೆತಿರುವ ೪ ಅಬ್ಜ ಅಮೇರಿಕಾ ಡಾಲರ್ ಸಾಲದ ದೊಡ್ಡ ಸಹಾಯದಿಂದ ನಾವು ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಸ್ಥೈರ್ಯ ಗಳಿಸಲು ಸಾಧ್ಯವಾಯಿತು, ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ನೀಡಿದರು.

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಪ್ರಸ್ತುತ ಶ್ರೀಲಂಕಾದ ಪ್ರವಾಸದಲ್ಲಿದ್ದಾರೆ. ಅವರ ಜೊತೆ ಮಾತನಾಡುವಾಗ ಅಲಿ ಸಾಬರಿಯವರು ಆಭಾರ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಡಾ. ಜಯಶಂಕರ ಇವರು ಶ್ರೀಲಂಕಾಗೆ ‘ನಾನು ಬರುವ ಮುಖ್ಯ ಉದ್ದೇಶ ಈ ಕಷ್ಟದ ಪರಿಸ್ಥಿತಿಯಲ್ಲಿ ಶ್ರೀಲಂಕಾಗೆ ಬೆಂಬಲ ನೀಡುವುದಾಗಿತ್ತು’, ಇದನ್ನು ಸ್ಪಷ್ಟಪಡಿಸಿದರು. ಅವರು ಮಾತು ಮುಂದುವರೆಸಿ, ಭಾರತ ಶ್ರೀಲಂಕಾದ ಆರ್ಥಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ಉರ್ಜಾ, ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಈ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.