ಭದ್ರತೆಗಾಗಿ ಅಳವಡಿಸಿರುವ ಸಿಸಿಟಿವಿ ಮೂಲಕ ನೆರೆಹೊರೆಯವರ ಬೇಹುಗಾರಿಕೆ ಮಾಡಲು ಸಾಧ್ಯವಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) – ಭದ್ರತೆಯ ಕಾರಣ ಹೇಳುತ್ತಾ ಸಿಸಿಟಿವಿ ಅಳವಡಿಸಿ ನೆರೆಯವರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬೇಹುಗಾರಿಕೆ ನಡೆಸಲು ಅನುಮತಿ ನೀಡಲಾಗುವುದಿಲ್ಲ, ಎಂದು ಕೇರಳ ಉಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಈ ಕುರಿತು ಕೇರಳದ ಪೊಲೀಸ ಮಹಾನಿರ್ದೇಶಕರಿಗೆ ಸರಕಾರದೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನವನ್ನು ನಿರ್ಧರಿಸುವಂತೆ ಆದೇಶಿಸಿದೆ. ಈ ಬಗ್ಗೆ ಮುಂದಿನ ತಿಂಗಳು ಆಲಿಕೆ ನಡೆಯಲಿದೆ.