ಹಲಾಲ ಮಾಂಸ ಮತ್ತು ಉತ್ಪನ್ನಗಳ ರಫ್ತಿನ ಬಗ್ಗೆ ಕೇಂದ್ರ ಸರಕಾರದ ಕರಡು ಸಿದ್ಧ !

ಫೆಬ್ರುವರಿ 17 ರ ವರೆಗೆ ಸೂಚನೆ ಮತ್ತು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ಅವಕಾಶ

ನವ ದೆಹಲಿ – ಕೇಂದ್ರೀಯ ವಾಣಿಜ್ಯ ಸಚಿವಾಲಯವು ಎಲ್ಲ ತರಹದ ಮಾಂಸ ಮತ್ತು ಅವುಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ `ಹಲಾಲ ಪ್ರಮಾಣ ಪತ್ರ’ ನೀಡಿ ರಫ್ತು ಮಾಡುವ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಲು ಒಂದು ಕರಡನ್ನು ರೂಪಿಸಿದೆ. ಈ ಕರಡು ಅಂತಿಮಗೊಂಡ ಬಳಿಕ ಸೂಕ್ತ ಪ್ರಮಾಣಪತ್ರವನ್ನು ತೆಗೆದುಕೊಂಡ ನಂತರವೇ ಹಲಾಲ ಮಾಂಸ ಮತ್ತು ಅವುಗಳಿಗೆ ಸಂಬಂಧಿಸಿದಂತಹ ಉತ್ಪನ್ನಗಳನ್ನು ರಫ್ತು ಮಾಡಲು ಅನುಮತಿ ದೊರೆಯಲಿದೆ. ಈ ಪ್ರಮಾಣಪತ್ರ `ಭಾರತೀಯ ಗುಣಮಟ್ಟ ಪರಿಷತ್ತಿನ’ ಮಂಡಳಿಯು ಅಂಗೀಕರಿಸಿದ ಶಾಖೆಯಿಂದಲೇ ನೀಡಲಾಗುವುದು. ಸಧ್ಯಕ್ಕೆ ಈ ಕರಡು ಜನತೆ ಮತ್ತು ಉದ್ಯೋಗ ಕ್ಷೇತ್ರದವರಿಗೆ ಸಿದ್ಧಪಡಿಸಲಾಗಿದೆ. ಅವರು ಫೆಬ್ರುವರಿ 17 ರ ವರೆಗೆ ಸೂಚನೆ ಮತ್ತು ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಬಹುದಾಗಿದೆ.