ಕೇರಳದಿಂದ ಪಿ.ಎಫ್.ಐ ಕಾರ್ಯಕರ್ತನ ಬಂಧನ !

ಮುಸಲ್ಮಾನೆತರರ ಮೇಲೆ ದಾಳಿ ನಡೆಸುವುದಕ್ಕೆ ಮಾಹಿತಿ ಸಂಗ್ರಹಿಸಿ ಪಟ್ಟಿ ತಯಾರಿಸುತ್ತಿದ್ದ !

ತಿರುವನಂತಪುರಂ (ಕೇರಳ) – ರಾಷ್ಟ್ರೀಯ ತನಿಖಾ ದಳವು ನಿಷೇಧಿಸಿರುವ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ) ಮಹಮ್ಮದ್ ಸಾಧಿಕ್ ಎಂಬ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಕೊಲ್ಲಮ ಜಿಲ್ಲೆಯಲ್ಲಿನ ಚಾವರದಲ್ಲಿ ದಾಳಿ ನಡೆಸಿ ಅಲ್ಲಿಂದ ಆಕ್ಷೇಪಾರ್ಹ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಧಿಕ್ ಇವನನ್ನು ಈ ಸಂಘಟನೆಯಲ್ಲಿ ‘ರಿಪೋರ್ಟರ್’ ಈ ಹೆಸರಿನಿಂದ ಗುರುತಿಸುತ್ತಿದ್ದರು. ಈ ಸಂಘಟನೆಯ ದಾಳಿ ನಡೆಸುವ ಗುಂಪಿಗೆ ಮುಸಲ್ಮಾನೆತರರ ಮಾಹಿತಿ ಸಂಗ್ರಹಿಸಿ ಪೂರೈಸುತ್ತಿದ್ದನು. ಇಂತಹ ಜನರ ಸೂಚಿ ತಯಾರಿಸಿದ್ದನು. ಅವನು ಮುಸಲ್ಮಾನ ಯುವಕರ ಬುದ್ಧಿಭ್ರಷ್ಟ ಮಾಡಿ ಲಷ್ಕರ್-ಎ-ತೋಯ್ಬಾ ಮತ್ತು ಇಸ್ಲಾಮಿಕ್ ಸ್ಟೇಟ್ ಈ ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಪ್ರಚೋದಿಸುತ್ತಿದ್ದ.