ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ !

ನವದೆಹಲಿ- ‘ವರ್ಲ್ದ ಪಾಪ್ಯುಲೇಶನ ರಿವ್ಯೂ’ ಈ ಜಗತ್ತಿನ ವಿವಿಧ ದೇಶಗಳ ಜನಗಣತಿಯ ಮೇಲೆ ಗಮನವಿಡುವ ಸಂಸ್ಥೆಯು ನೀಡಿದ ಮಾಹಿತಿಯನುಸಾರ ಭಾರತವು 2022 ರ ಮಧ್ಯದಲ್ಲಿಯೇ ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದೆ. ಇದರಿಂದ ಈಗ ಭಾರತ ಜಗತ್ತಿನ ಅತ್ಯಧಿಕ ಜನಸಂಖ್ಯೇಯ ದೇಶವಾಗಿದೆ. 1961 ರ ಬಳಿಕ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ವೃದ್ಧಿಯ ಪ್ರಮಾಣ ಕುಸಿದಿದೆಯೆಂದು ಸಂಸ್ಥೆಯ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. 2022 ರ ಕೊನೆಯಲ್ಲಿ ಭಾರತದ ಜನಸಂಖ್ಯೆ 141 ಕೋಟಿ 70 ಲಕ್ಷಗಳಷ್ಟು ಇತ್ತು ಹಾಗೂ ಚೀನಾದ ವರದಿಯನುಸಾರ ಅವರ ಜನಸಂಖ್ಯೆ 141 ಕೋಟಿ 20 ಲಕ್ಷಗಳಷ್ಟು ಇದೆ. ಭಾರತಕ್ಕಿಂತ ಚೀನಾದ ಜನಸಂಖ್ಯೆ 50 ಲಕ್ಷಗಳಷ್ಟು ಕಡಿಮೆಯಿದೆ. ಎಪ್ರಿಲ್ 2023 ರ ವರೆಗೆ ಭಾರತದ ಜನಸಂಖ್ಯೆ 143 ಕೋಟಿಗಿಂತ ಮುಂದೆ ಹೋಗಬಹುದು ಎನ್ನುವ ಅಂದಾಜು ಇದೆ.

ಕಳೆದ ವರ್ಷ ಚೀನಾದಲ್ಲಿ 1 ಕೋಟಿ 41 ಸಾವಿರ ಜನರು ಮರಣ ಹೊಂದಿದ್ದಾರೆ. ಹಿಂದಿನ 2 ತಿಂಗಳಿನಲ್ಲಿ 60 ಸಾವಿರಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪಿದರು. ಒಂದು ಕಡೆ ಸಾವು ವೇಗ ಪಡೆದುಕೊಳ್ಳುತ್ತಿದ್ದರೆ, ಜನಸಂಖ್ಯೆಯ ಪ್ರಮಾಣ ಇಳಿಮುಖವಾಗುತ್ತಿದೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲ ಪಕ್ಷಗಳ ರಾಜಕಾರಣಿಗಳು ಜನಸಂಖ್ಯಾ ಹೆಚ್ಚಳದ ಮೇಲೆ ನಿಯಂತ್ರಣ ಹೇರಲು ನಿರ್ದಿಷ್ಟ ಪ್ರಯತ್ನಗಳನ್ನು ಮಾಡದೇ ಇರುವುದರ ಪರಿಣಾಮವೇ ಇದಾಗಿದೆ !