ವಿಜಯಪುರ – ಅತ್ಯಂತ ಸರಳ ಜೀವನ, ಜ್ಞಾನಯೋಗಿ, ಭಕ್ತರ ಪಾಲಿಗೆ ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಗಲಿಕೆಯಿಂದ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ೨೦೧೬ ರಲ್ಲಿ ವಿಜಯಪುರದ ಕಾರ್ಯಕ್ರಮವೊಂದರಲ್ಲಿ ಸನಾತನದ ಸಾಧಕರು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಅವರ ದರ್ಶನ ಪಡೆದರು ಹಾಗೂ ಮಹಾಸ್ವಾಮಿಗಳ ಶುಭ ಹಸ್ತದಿಂದ ಸನಾತನ ಪಂಚಾಂಗ ೨೦೧೬ ರ ಉದ್ಘಾಟನೆ ಮಾಡಲಾಯಿತು ಆ ಸಮಯದಲ್ಲಿ ಸನಾತನ ೨೦೦ ಪಂಚಾಂಗ ವಿತರಣೆಗಾಗಿ ತರಲಾಗಿತ್ತು. ಮಹಾಸ್ವಾಮಿಗಳು ವೇದಿಕೆಯ ಮೇಲೆಯೇ ಸನಾತನ ಪಂಚಾಂಗವನ್ನು ಕೈಯಲ್ಲಿ ಹಿಡಿದು ‘ಸನಾತನ ಪಂಚಾಂಗವು ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು’ ಎಂದು ಕರೆ ನೀಡಿದರು. ಇದರಿಂದ ೨೦೦ ಪಂಚಾಂಗ ೧ ಗಂಟೆಯಲ್ಲಿ ವಿತರಣೆ ಆಯಿತು ಹಾಗೂ ಪುನಃ ೨೦೦೦ ಪಂಚಾಂಗ ತರಬೇಕಾಯಿತು.
ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಆಠವಲೆ ಹಾಗೂ ಸನಾತನದ ಬಗ್ಗೆ ಮಹಾಸ್ವಾಮಿಯವರಿಂದ ಗೌರವೋದ್ಗಾರ
‘ಸನಾತನವು ತುಂಬಾ ಒಳ್ಳೆಯ ಕಾರ್ಯ ಮಾಡುತ್ತಿದೆ, ಆಠವಲೆಯವರು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ) ತುಂಬಾ ಉತ್ತಮ ರೀತಿಯಲ್ಲಿ ಎಲ್ಲರನ್ನು ಒಗ್ಗೂಡಿಸುತ್ತಿದ್ದಾರೆ. ಸನಾತನವು ಉತ್ತಮ ಕಾರ್ಯ ಮಾಡುತ್ತಿದೆ’ ಎಂದಿದ್ದರು.