ಹದಗೆಟ್ಟ ಈಜಿಪ್ತನ ಆರ್ಥಿಕ ಪರಿಸ್ಥಿತಿ

ಕಾಯರೋ – ಪಾಕಿಸ್ತಾನದ ನಂತರ ಈಗ ಈಜಿಪ್ತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದೇಶದಲ್ಲಿ ಬೆಲೆ ಏರಿಕೆ ಎಷ್ಟು ಹೆಚ್ಚು ಆಗಿದೆ ಎಂದರೆ ಬಡವರಿಗೆ ಎರಡು ಹೊತ್ತಿನ ಊಟ ಸಿಗುವುದು ಕೂಡ ಕಷ್ಟವಾಗಿದೆ. ಆಹಾರ ಧಾನ್ಯದ ಆಮದಿನ ಮೇಲೆ ಅವಲಂಬಿಸಿರುವ ಈ ದೇಶದಲ್ಲಿನ ಬೆಲೆ ಏರಿಕೆ ಸರಾಸರಿ ೧೦ ಕೋಟಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಇಲ್ಲಿ ಅಕ್ಕಿ, ಎಣ್ಣೆ, ಹಾಲು ಮುಂತಾದ ಜೀವನೋಪಯೋಗಿ ವಸ್ತುಗಳ ಪೂರೈಕೆ ಮೇಲೆ ಕೂಡ ನಿರ್ಬಂಧ ಹೇರಲಾಗಿದೆ.