ಕಾಬುಲ್ (ಅಪಘಾನಿಸ್ತಾನ) ಮಾಜಿ ಮಹಿಳಾ ಸಾಂಸದೆಯ ಮನೆಗೆ ನುಗ್ಗಿ ಹತ್ಯೆ !

ಕಾಬುಲ್ (ಅಫ್ಘಾನಿಸ್ತಾನ) – ಇಲ್ಲಿಯ ಮಾಜಿ ಮಹಿಳಾ ಸಾಂಸದೆ ಮುರ್ಸಲ್ ನಬಿಜಾದಾ ಇವರ ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಅವರ ಅಂಗರಕ್ಷಕ ಕೂಡ ಸಾವನ್ನಪ್ಪಿದ್ದಾನೆ. ಹಾಗೂ ನಬಿಜಾದಾ ಇವರ ಸಹೋದರ ಮತ್ತು ಇನ್ನೊಬ್ಬ ಅಂಗರಕ್ಷಕ ಗಾಯಗೊಂಡಿದ್ದಾರೆ. ಆಗಸ್ಟ್ ೨೦೨೧ ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಆಡಳಿತಕ್ಕೆ ಬಂದ ನಂತರ ದೇಶ ತೊರೆಯದಿರುವ ಮಹಿಳಾ ನಾಯಕಿಯರಲ್ಲಿ ನಬಿಜಾದಾ ಕೂಡ ಒಬ್ಬರಾಗಿದ್ದರು.

ಸಂಪಾದಕರ ನಿಲುವು

ತಾಲಿಬಾನಿ ಆಡಳಿತದಲ್ಲಿ ಮಹಿಳೆಯರ ದುರ್ದಶೆಯ ಬಗ್ಗೆ ಮಹಿಳೆಯ ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು ಗಮನಹರಿಸುವರೆ ?