`ಕೇವಲ ಇಸ್ಲಾಮವೇ ಪ್ರೀತಿ ಮತ್ತು ವಿಶ್ವಾಸದ ಸಂದೇಶ ನೀಡುತ್ತದೆ !’ (ಅಂತೆ)

‘ಮನುಸ್ಮೃತಿ’ ಮತ್ತು ‘ರಾಮಚರಿತ ಮಾನಸ’ ಇವುಗಳನ್ನು ‘ದ್ವೇಷ ಹರಡುವ ಗ್ರಂಥ ಎಂದು ಹೇಳುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಯಾದವ ಇವರ ಇನ್ನೊಂದು ಹಳೆಯ ಹೇಳಿಕೆ ಬಹಿರಂಗ !

ರಾಷ್ಟ್ರೀಯ ಜನತಾದಳದ ಮುಖಂಡ ಚಂದ್ರಶೇಖರ ಮತ್ತು ಯಾದವ ಭಾಜಪದ ಓಬಿಸಿ ಮೋರ್ಚಾದ ಕಾರ್ಯದರ್ಶಿ ನಿಖಿಲ್ ಆನಂದ

ಪಾಟಲಿಪುತ್ರ (ಬಿಹಾರ) – ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ಮುಖಂಡ ಚಂದ್ರಶೇಖರ ಯಾದವ ಇವರು ೩ ದಿನಗಳ ಹಿಂದೆ ‘ಮನುಸ್ಮೃತಿ’, ‘ರಾಮಚರಿತಮಾನಸ’ ಮತ್ತು ಪ.ಪೂ. ಗೋಳವಲಕರ ಗುರೂಜಿ ಇವರ ‘ಬಂಚ್ ಆಫ್ ಥಾಟ್ಸ್’ ಈ ಗ್ರಂಥಗಳಿಗೆ ‘ದ್ವೇಷ ಹರಡುವ ಗ್ರಂಥ’, ಎಂದು ಹೇಳಿದ್ದರು. ಈಗ ಅವರ ಮತ್ತೊಂದು ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಅದರಲ್ಲಿ ಅವರು, ‘ಪ್ರೀತಿ ಮತ್ತು ವಿಶ್ವಾಸ ನೀಡುವ ಸಂದೇಶ ಕೇವಲ ಇಸ್ಲಾಮವಾಗಿದೆ. ನಮಗೆ ದ್ವೇಷ ಹರಡುವವರ ಜೊತೆಗೆ ಹೋರಾಡಬೇಕಿದೆ. ದ್ವೇಷ ಹರಡುವವರನ್ನು ಸೋಲಲಿ ಮತ್ತು ವಿಶ್ವಾಸದ ಸಂದೇಶ ನೀಡುವವರು ವಿಜಯವಾಗಲಿ’, ಎಂದು ಹೇಳಿದ್ದರು.

೧. ಈ ವಿಡಿಯೋ ಚಂದ್ರಶೇಖರ ಯಾದವ ಇವರ ಫೇಸ್ ಬುಕ್ ಖಾತೆಯಲ್ಲಿ ಮೇ ೪, ೨೦೨೨ ರಂದು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಅವರು ಈದ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾಣುತ್ತದೆ. ಅವರಿಗೆ ಪತ್ರಕರ್ತರು ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.

೨. ಭಾಜಪದ ಓಬಿಸಿ ಮೋರ್ಚಾದ ಕಾರ್ಯದರ್ಶಿ ನಿಖಿಲ್ ಆನಂದ ಇವರು ಈ ವಿಡಿಯೋ ಟ್ವಿಟರ್ ನಲ್ಲಿ ಶೇರ್ ಮಾಡುತ್ತಾ ರಾಜ್ಯದ ಮುಖ್ಯಮಂತ್ರಿ ನಿತೀಶ ಕುಮಾರ ಇವರಿಗೆ, ‘ನಿಮ್ಮ ಸಚಿವರು ಈ ರೀತಿಯ ಹೇಳಿಕೆಯ ಬಗ್ಗೆ ನೀವು ಮೌನ ಏಕೆ ?’, ಎಂಬ ಪ್ರಶ್ನೆ ಕೇಳಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಚಂದ್ರಶೇಖರ ಅವರ ಹಿಂದೂ ದ್ವೇಷದ ಮಾನಸಿಕತೆ ಸ್ಪಷ್ಟವಾಗುತ್ತದೆ ! ಒಂದು ನೀತಿಯ ಪ್ರಕಾರ ಅವರು ಹಿಂದೂ ಧರ್ಮದ ಅವಮಾನ ಮಾಡಿ ಇತರ ಧರ್ಮದ ಮತಗಳಿಗಾಗಿ ಅವರ ಧರ್ಮವನ್ನು ಹೊಗಳುತ್ತಾರೆ. ಎಲ್ಲಿಯವರೆಗೆ ಬಿಹಾರದಲ್ಲಿನ ಹಿಂದೂಗಳು ಸಂಘಟಿತರಾಗುವುದಿಲ್ಲ ಅಲ್ಲಿಯವರೆಗೆ ಇದೆ ರೀತಿಯ ರಾಜಕೀಯ ಮುಂದುವರೆಯುತ್ತದೆ !