ಭಾರತವು ಯಾರ ಒತ್ತಡಕ್ಕೂ ಬಗ್ಗದೇ ಭಯೋತ್ಪಾದನೆ ಮತ್ತು ಚೀನಾಗೆ ಸಮರ್ಪಕವಾದ ಪ್ರತ್ಯುತ್ತರ ನೀಡಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ

ಚೆನ್ನೈ (ತಮಿಳುನಾಡು) – ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಮತ್ತು ಚೀನಾದೊಂದಿಗಿನ ಗಡಿಯ ಸಂಘರ್ಷಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತ ಯಾರ ಒತ್ತಡಕ್ಕೂ ಮಣಿದಿಲ್ಲ. ಭಾರತ ತನ್ನ ರಕ್ಷಣೆಗಾಗಿ ಎಲ್ಲ ರೀತಿಯಲ್ಲಿ ಕ್ರಮ ಕೈಕೊಳ್ಳಲಿದೆಯೆಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿಯ ತಮಿಳು ಸಾಪ್ತಾಹಿಕ `ತುಘಲಕ್’ನ 53 ನೇ ವರ್ಧ್ಯಂತೋತ್ಸವ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. `ಪುಲವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವೆಂದು ನಮ್ಮ ವಾಯುದಳವು ಪಾಕಿಸ್ತಾನದ ಬಾಲಾಕೋಟದೊಳಗೆ ಹೋಗಿ ಕಾರ್ಯಾಚರಣೆ ನಡೆಸಿ ಸೂಕ್ತ ಸಂದೇಶವನ್ನೇ ನೀಡಿತ್ತು’, ಎಂದು ಅವರು ಈ ಸಂದರ್ಭದಲ್ಲಿ ನೆನಪು ಮಾಡಿಕೊಟ್ಟರು.

ಜಯಶಂಕರ ಮುಂದುವರಿಸುತ್ತಾ, ಚೀನಾದ ಉತ್ತರ ಗಡಿಯಲ್ಲಿ ದೊಡ್ಡಪ್ರಮಾಣದಲ್ಲಿ ಸೈನ್ಯ ನಿಯೋಜಿಸಿ ನಮ್ಮ ಗಡಿಯ ಉಲ್ಲಂಘಿಸಲು ಪ್ರಯತ್ನಿಸುತ್ತಿದೆ. ಅದರ ಮೇಲೆ ನಾವು ಸೂಕ್ತವಾದ ಪ್ರತ್ಯುತ್ತರವನ್ನು ನೀಡಿದ್ದೆವು. ಗಡಿಯಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ನಮ್ಮ ಸೈನಿಕರು ರಕ್ಷಣೆಗಾಗಿ ಕಾರ್ಯನಿರತರಾಗಿದ್ದಾರೆ.

ಒಂದುವೇಳೆ 1947 ರಲ್ಲಿ ಭಾರತದ ವಿಭಜನೆ ಆಗದೇ ಇದ್ದರೇ, ಚೀನಾ ಅಲ್ಲ ಭಾರತವು ಎಲ್ಲಕ್ಕಿಂತ ದೊಡ್ಡ ದೇಶ ಆಗುತ್ತಿತ್ತು, ಎಂದು ವಿದೇಶಾಂಗ ಸಚಿವ ಜೈಶಂಕರ ಇವರು ಹೇಳಿದರು.