ದ್ವೇಷ ಹರಡುವ ವರದಿಗಾರರನ್ನು ತೆಗೆದುಹಾಕಿರಿ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಟಿ.ಆರ್.ಪಿ.ಗಾಗಿ (`ಟಾರ್ಗೆಟ್ ರೇಟಿಂಗ ಪಾಯಿಂಟ್’ಗಾಗಿ) ವಾರ್ತಾವಾಹಿನಿಗಳು ಸುದ್ದಿಗಳನ್ನು ಪ್ರಚೋದನಾತ್ಮಕವಾಗಿ ತಯಾರಿಸುತ್ತವೆ. ದ್ವೇಷ ಹರಡುವ ವರದಿಗಾರರನ್ನು ಕಾರ್ಯಕ್ರಮದಿಂದ ತೆಗೆದುಹಾಕಬೇಕು. ದ್ವೇಷ ಹರಡುವ ವಿಷಯ ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿನ ದೂರಿನ ಮೇಲಿನ ಆಲಿಕೆಯ ಸಮಯದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಹೇಳಿಕೆಯ ಮೇಲೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ. ಅದರ ಮೇಲೆ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

೧. ಆಲಿಕೆಯ ಅಮಯದಲ್ಲಿ `ನ್ಯೂಸ ಬ್ರಾಡಕಾಸ್ಟರ್ಸ ಮತ್ತು ಡಿಜಿಟಲ ಅಸೋಸಿಯೇಷನ್’ (ಎನ್.ಬಿ.ಎಸ್.ಎ.ನಿಂದ), ನಾವು ಈ ಕುರಿತು ಪ್ರಕರಣದ ಆಲಿಕೆ ನಡೆಸುತ್ತೇವೆ ಹಾಗೂ ವಿವಾದಿತ ವಿಡಿಯೋಗಳನ್ನು ತೆಗೆದುಹಾಕುತ್ತೇವೆ. ಆದರೆ ಸುದರ್ಶನ ಟಿವಿ, ರಿಪಬ್ಲಿಕ್ ಟಿವಿಗಳಂತಹ ಕೆಲವು ವಾರ್ತಾವಾಹಿನಿಗಳು ನಮ್ಮ ಸದಸ್ಯರಾಗಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದೆ.

೨. ಉತ್ತರಾಖಂಡ ಸರಕಾರವು ನ್ಯಾಯಾಲಯದಲ್ಲಿ, ಅವರ ರಾಜ್ಯದಲ್ಲಿ ದ್ವೇಷಪೂರಿತ ಹೇಳಿಕೆಯ ಸಂದರ್ಭದಲ್ಲಿ ಒಟ್ಟು 118 ದೂರು ದಾಖಲಿಸಲಾಗಿದೆಯೆಂದು ಹೇಳಿದೆ.

೩. ಉತ್ತರಪ್ರದೇಶ ಸರಕಾರವು, ದ್ವೇಷಪೂರಿತ ಹೇಳಿಕೆಯ ವಿಷಯದಲ್ಲಿ ಅಲ್ಲಿ ಒಟ್ಟು 581 ದೂರು ದಾಖಲಿಸಲಾಗಿದೆಯೆಂದು ಹೇಳಿದೆ.

೪. ಕೇಂದ್ರ ಸರಕಾರವು, ಎಲ್ಲಿಯ ವರೆಗೆ ಗಂಭೀರ ಸಮಸ್ಯೆ ನಿರ್ಮಾಣವಾಗುವುದಿಲ್ಲವೋ ಅಥವಾ ದೇಶದ ಸುರಕ್ಷತೆಗೆ ಅಪಾಯವಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಪ್ರಕರಣದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹಳಿದೆ.

ನ್ಯಾಯಾಲಯ ಮಂಡಿಸಿದ ವಿಷಯಗಳು

ಅ. ಎಲ್ಲವೂ ಟಿ.ಆರ್.ಪಿ. ಮೇಲೆ ನಡೆಯುತ್ತಿದೆ. ವಾರ್ತಾವಾಹಿನಿಗಳು ಪರಸ್ಪರರೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಅವರು ಘಟನೆಗಳನ್ನು ಪ್ರಚೋದನಾತ್ಮಕ ಪದ್ಧತಿಯಲ್ಲಿ ಮಂಡಿಸುತ್ತವೆ. ದೃಶ್ಯಗಳ ಮೂಲಕ ಅವರು ಸಮಾಜದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ವೃತ್ತ ಪತ್ರಿಕೆಗಳ ತುಲನೆಯಲ್ಲಿ ವಾರ್ತಾ ವಾಹಿನಿಗಳು ಜನರಿಗೆ ಹೆಚ್ಚು ಪ್ರಭಾವಿತಗೊಳಿಸುತ್ತಿರುತ್ತಿವೆ. ತಮ್ಮ ಶ್ರೋತೃಗಳು ಇಂತಹ ಪ್ರಸಾರಗಳನ್ನು ನೋಡುವಷ್ಟು ಸಕ್ಷಮರಾಗಿದ್ದಾರೆಯೇ ?

ಆ. ನ್ಯಾಯಾಲಯವು ಈ ಸಂದರ್ಭದಲ್ಲಿ `ಎನ್.ಬಿ.ಎಸ್.ಎ.’ನ ವಕೀಲರನ್ನು, ಒಂದು ವೇಳೆ ವಾರ್ತಾ ವಾಹಿನಿಗಳಲ್ಲಿ ಕಾರ್ಯಕ್ರಮವನ್ನು ಮಂಡಿಸುವ ಸೂತ್ರ ಸಂಚಾಲಕರು ಸಮಸ್ಯೆಯನ್ನು ನಿರ್ಮಾಣ ಮಾಡುತ್ತಿದ್ದರೆ, ಏನು ಮಾಡಬೇಕು ? ಎಂದು ಕೇಳಿದಾಗ, `ಎನ್.ಬಿ.ಎಸ್.ಎ’ ಈ ಸಂದರ್ಭದಲ್ಲಿ ಪಕ್ಷಪಾತ ಮಾಡಬಾರದು ಎಂದು ಹೇಳಿದೆ. ಅವರು ಎಷ್ಟು ಬಾರಿ ಇಂತಹ ಸೂತ್ರ ಸಂಚಾಲಕರನ್ನು ತೆಗೆದು ಹಾಕಿದ್ದಾರೆ ? ನೇರ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಸೂತ್ರ ಸಂಚಾಲಕರೇ ಜವಾಬ್ದಾರರಾಗಿರುತ್ತಾರೆ; ಕಾರಣ ಅವರ ಬಳಿ ಅದರ ನಿಯಂತ್ರಣವಿರುತ್ತದೆ. ಒಂದು ವೇಳೆ ಅವನು ನಿಷ್ಪಕ್ಷನಾಗಿಲ್ಲದೇ ಇದ್ದರೆ ಮತ್ತು ಒಂದೇ ಪಕ್ಷದ ಪರವಾಗಿದ್ದರೆ, ಅವನು ಇನ್ನೊಂದು ಪಕ್ಷದ ಧ್ವನಿಯನ್ನು ಅಡಗಿಸಬಹುದಾಗಿದೆ, ಒಂದು ಪಕ್ಷದ ಬಗ್ಗೆ ಪ್ರಶ್ನೆ ಕೇಳದೇ ಇದ್ದರೆ ಒಂದು ರೀತಿಯಲ್ಲಿ ಇದು ಪಕ್ಷಪಾತವೇ ಆಗಿದೆ.

ಇ. ವಾರ್ತಾವಾಹಿನಗಳ ಮೇಲಿನ ವಾರ್ತೆಗಳ ಪರಿಣಾಮ ಸಂಪೂರ್ಣ ದೇಶದ ಮೇಲೆ ಆಗುತ್ತಿರುತ್ತದೆ. ಅವರು ಅವರ ಮನಸ್ಸಿನಲ್ಲಿರುವ ವಿಷಯಗಳನ್ನು ಹೇಳುವ ಅಧಿಕಾರವಿಲ್ಲ. ಯಾವ ಸೂತ್ರ ಸಂಚಾಲಕರು ಕಾರ್ಯಕ್ರಮದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಯೋ, ಅವರನ್ನು ತೆಗೆದುಹಾಕಿ ಅವರಿಂದ ದೊಡ್ಡ ದಂಡವನ್ನು ವಸೂಲು ಮಾಡಬೇಕು.

ಈ. ಯಾವಾಗ ಯಾವುದಾದರೊಂದು ವಾರ್ತಾವಾಹಿನಿ ಜನರನ್ನು ಕರೆಯುತ್ತದೆಯೋ, ಆಗ ಅದು ಜನರಿಗೆ ಬೈಗುಳವನ್ನು ಕೂಡ ನೀಡುತ್ತದೆ. ಉದಾಹರಣೆಯೆಂದು ನೋಡಿದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯು ವಿಮಾನದಲ್ಲಿ ಓರ್ವ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿರುವ ಘಟನೆ ನಡೆಯಿತು. ಆ ವ್ಯಕ್ತಿಯನ್ನು ಬಂಧಿಸಿದ ಬಳಿಕ ಮಾಧ್ಯಮಗಳು ಅವಳ ವಿರುದ್ಧ ಅಶ್ಲೀಲ ಶಬ್ದವನ್ನು ಉಪಯೋಗಿಸಿದವು. ಇದು ಒಂದು ಪ್ರಕರಣದಂತಿದೆ. ದಯವಿಟ್ಟು ಯಾರನ್ನೂ ಅಪಕೀರ್ತಿ ಮಾಡಬೇಡಿರಿ. ಪ್ರತಿಯೊಬ್ಬರಿಗೂ ಘನತೆ ಇರುತ್ತದೆ.