ಕೇಂದ್ರ ಗೃಹ ಸಚಿವಾಲಯದ ದಾಖಲೆಗಳಲ್ಲಿ `ಹಿಂದೂ ಭಯೋತ್ಪಾದನೆ’ ಎಂಬ ಪದವೇ ಇಲ್ಲ !

`ಇಸ್ಲಾಮಿ ಭಯೋತ್ಪಾದನೆ’ ಇರುವುದು ಮಾಹಿತಿಯಿಂದ ಸ್ಪಷ್ಟ !

ನವದೆಹಲಿ – ಕೇಂದ್ರ ಗೃಹ ಸಚಿವಾಲಯದ ದಾಖಲೆಗಳಲ್ಲಿ `ಹಿಂದೂ ಭಯೋತ್ಪಾದನೆ’ ಎಂಬ ಪದವೇ ಇಲ್ಲ, ಎಂದು ‘ಮಾಹಿತಿ ಹಕ್ಕು’ ಕಾರ್ಯಕರ್ತರಾದ ಪ್ರಫುಲ್ಲ ಶಾರದ ಇವರಿಗೆ ಮಾಹಿತಿ ಸಿಕ್ಕಿದೆ. `ಕೆಲವು ರಾಜಕೀಯ ಮುಖಂಡರ ಓಲೈಕೆಯ ರಾಜಕಾರಣಕ್ಕಾಗಿ `ಹಿಂದೂ ಭಯೋತ್ಪಾದನೆ’ ಪದದ ನಿರ್ಮಿತಿ ಮಾಡಿದ್ದಾರೆ, ಎಂದು ಪ್ರಪುಲ್ಲ ಶಾರದ ಇವರು ಆರೋಪಿಸಿದ್ದಾರೆ.

೧. ಪ್ರಫುಲ್ಲ ಶಾರದ ಇವರ ಮಾಹಿತಿಯ ಅರ್ಜಿಯಲ್ಲಿ, ಭಾರತದಲ್ಲಿ ಎಷ್ಟು ಭಯೋತ್ಪಾದಕ ಸಂಘಟನೆಗಳಿವೆ ? ಅವುಗಳ ಹೆಸರು ಮತ್ತು ವಿಸ್ತಾರವಾದ ಮಾಹಿತಿ ನೀಡಬೇಕು. ಹಾಗೂ ಅವುಗಳನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆಯೇ ? ಮತ್ತು ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಬಯ್ಯೋತ್ಪಾದನೆ ಎಂಬ ಪದ ಇದ್ದರೆ ಅದರ ಬಗ್ಗೆ ಕೂಡ ಮಾಹಿತಿ ನೀಡಬೇಕು ಎಂದು ವಿಚಾರಿಸಿದ್ದರು. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ನೀಡಲಾದ ಮಾಹಿತಿಯಲ್ಲಿ ಭಯೋತ್ಪಾದಕ ಸಂಘಟನೆಗಳ ಹೆಸರು ಮತ್ತು ವಿಸ್ತಾರವಾದ ಮಾಹಿತಿ ನೀಡುವುದರ ಜೊತೆಗೆ `ಕೇಸರಿ’ ಅಥವಾ `ಹಿಂದೂ ಭಯೋತ್ಪಾದನೆ’ ಎಂಬ ಯಾವುದೇ ಪದ ಅವರ ದಾಖಲೆಗಳಲ್ಲಿ ಇಲ್ಲವೆಂದು ಹೇಳಲಾಗಿದೆ.

೨. ಪ್ರಫುಲ್ಲ ಶಾರದ ಇವರು ಮುಖ್ಯವಾಗಿ ೨೦೦೬ ರಲ್ಲಿ ಮಾಲೆಗಾವ್ ಬಾಂಬ್ ಸ್ಫೋಟದ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ಸ್ಫೋಟದಲ್ಲಿ ಹಿಂದೂ ಅಥವಾ ಕೇಸರಿ ಭಯೋತ್ಪಾದಕರು ಸಹಭಾಗಿಯಾಗಿದ್ದರೇ ?’, ಎಂದು ಕೇಳಲಾಗಿತ್ತು.

೩. ಪ್ರಪುಲ್ಲ ಶಾರದ ಇವರು, ನಾನು ಕೇವಲ ಒಬ್ಬ ಭಾರತೀಯ ಅಷ್ಟೇ ಅಲ್ಲದೆ, ಒಬ್ಬ ಹಿಂದೂ ಕುಡ ಆಗಿದ್ದರಿಂದ ನೋವು ಉಂಟಾಗಿತ್ತು. ಒಂದು ವಿಶೇಷ ಧರ್ಮದ ಮತಗಳಿಸುವುದಕ್ಕಾಗಿ ಕೆಲವು ರಾಜಕಾರಣಿಗಳು ನಿರಂತರವಾಗಿ ದೇಶದಲ್ಲಿನ ಹಿಂದೂಗಳ ಅವಮಾನ ಮಾಡುತ್ತಿದ್ದರು ಅಥವಾ ಹಿಂದೂ ಅಥವಾ ಕೇಸರಿ ಭಯೋತ್ಪಾದನೆ ಈ ರೀತಿಯ ಸುಳ್ಳು ಪದಗಳನ್ನು ಪಸರಿಸುತ್ತಿದ್ದರೆ. `ಹಿಂದೂ ಭಯೋತ್ಪಾದನೆ’ ಅಸ್ತಿತ್ವದಲ್ಲೇ ಇಲ್ಲ; ಇದು ಕೇಂದ್ರ ಗೃಹ ಸಚಿವಾಲಯದಿಂದ ನೀಡಲಾದ ಮಾಹಿತಿಯಿಂದ `ಇಸ್ಲಾಮಿ ಭಯೋತ್ಪಾದನೆ’ ಅಸ್ತಿತ್ವದಲ್ಲಿ ಇರುವುದು ಸ್ಪಷ್ಟವಾಗಿದೆ ಮತ್ತು ಜಗತ್ತಿನಾದ್ಯಂತ ಅಮಾಯಕ ಜನರ ಹತ್ಯೆ ಮಾಡಿ ಜಗತ್ತಿಗೆ ತೊಂದರೆ ನೀಡುತ್ತಿದ್ದಾರೆ.

೪. ೪೨ ಸಂಘಟನೆಗಳನ್ನು `ಭಯೋತ್ಪಾದಕ ಸಂಘಟನೆ’ಗಳೆಂದು ಘೋಷಿಸಲಾಗಿದೆ. ಇದರಲ್ಲಿ `ಬಬ್ಬರ ಖಾಲ್ಸಾ ಇಂಟರ್ನ್ಯಾಷನಲ್, ಖಲಿಸ್ತಾನ್ ಕಮಾಂಡೋ ಫೋರ್ಸ್, ಖಲಿಸ್ತಾನ್ ಜಿಂದಾಬಾದ್ ಫೋರ್ಸ್, ಇಂಟರ್ ನ್ಯಾಷನಲ್ ಸಿಖ್ಕ ಯೂಥ್ ಫೆಡರೇಶನ್, ಲಷ್ಕರ್-ಎ-ತೋಯ್ಬಾ, ಪಸಬನ್-ಎ-ಅಹಲೆ ಹಾದಿ, ಜೈಶ್-ಎ-ಮಹಮ್ಮದ್ ಮುಂತಾದವುಗಳ ಸಮಾವೇಶವಿದೆ. ಇದರ ಜೊತೆಗೆ ಭಯೋತ್ಪಾದನೆಯನ್ನು ಎದುರಿಸಲು ಸರಕಾರವು ಅನೇಕ ಪ್ರಯತ್ನಗಳನ್ನು ಮಾಡಿದೆ ಮತ್ತು ಮಾಡುತ್ತಿದ್ದಾರೆ, ಎಂದು ಉತ್ತರದಲ್ಲಿ ಮಾಹಿತಿ ನೀಡಲಾಗಿದೆ.