ಗುಜರಾತನ ಸಮುದ್ರ ತೀರದಲ್ಲಿ 110 ಕಿ.ಮೀ. ಭೂಕುಸಿತ !

ಕರ್ಣಾವತಿ (ಗುಜರಾತ) – ಜೋಶಿಮಠ ಗ್ರಾಮದಲ್ಲಿ ಭೂಕುಸಿತ ಆಗುತ್ತಿರುವ ಹಿನ್ನಲೆಯಲ್ಲಿ ಈಗ ಗುಜರಾತನ ಸಮುದ್ರದ ದಡದಲ್ಲಿ 110 ಕಿಲೋ ಮೀಟರವರೆಗೆ ಭೂಕುಸಿತವಾಗುತ್ತಿದೆ. ಆದ್ದರಿಂದಲೇ ಕರ್ಣಾವತಿ ನಗರವು ಪ್ರತಿದಿನ 12 ರಿಂದ 15 ಮಿ.ಮೀ. ಕುಸಿಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ವಿಜ್ಞಾನಿ ರತೀಶ ರಾಮಕೃಷ್ಣನ್ ಮತ್ತು ಇತರ ವಿಜ್ಞಾನಿಗಳ ಅಭಿಪ್ರಾಯದಂತೆ `ಇಸ್ರೋ’ದ 2021 ರ ಸಂಶೋಧನೆಯಲ್ಲಿ, ಗುಜರಾತ, ದಿವ ಮತ್ತು ದಮನ ಪ್ರದೇಶಗಳ ಗುಜರಾತನ 1 ಸಾವಿರ 52 ಕಿ.ಮೀ ದಂಡೆಯು ಸ್ಥಿರವಾಗಿದೆ, ಆದರೆ 110 ಕಿ.ಮೀ ದಂಡೆಯು ಕುಸಿದಿರುವುದರಿಂದ ನಾಶವಾಗುತ್ತಾ ಹೋಗುತ್ತಿದೆ. ಇದರ ಹಿಂದೆ ವಾತಾವರಣದಲ್ಲಿನ ಬದಲಾವಣೆ ಮುಖ್ಯ ಕಾರಣವಾಗಿದೆ. ಆದ್ದರಿಂದ 313 ಭೂಮಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.