ಕಣ್ಣೂರ (ಕೇರಳ)ನ ಮನೆಯಲ್ಲಿ ಸ್ಫೋಟ ಓರ್ವ ವ್ಯಕ್ತಿಗೆ ಗಾಯ

ಪೊಲೀಸರಿಂದ ಮನೆಯಲ್ಲಿ ಬಾಂಬ್ ತಯಾರಿಸುವಾಗ ಸ್ಫೋಟ ಎಂದು ಸಂದೇಹ !

ಕಣ್ಣೂರ(ಕೇರಳ) – ಕಣ್ಣೂರ ಜಿಲ್ಲೆಯ ಥಾಲಾಸ್ಸೇರಿ ಗ್ರಾಮದ ಒಂದು ಮನೆಯಲ್ಲಿ ಜನವರಿ 12 ರಂದು ನಡೆದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಗಾಯಗೊಂಡನು. ಪೊಲೀಸರು ಇದು ಬಾಂಬ್ ಸ್ಫೋಟಗೊಂಡಿರುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ. ಜಿತಿನ ನಾದಮ್ಮಲ ಮನೆಯಲ್ಲಿ ಈ ಸ್ಫೋಟವಾಗಿದೆ. ಇದರಲ್ಲಿ ಜಿತಿನ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ ಆಯುಕ್ತ ಅಜೀತ ಕುಮಾರ ಇವರು, `ಜಿತಿನ ಮನೆಯಲ್ಲಿಯೇ ಬಾಂಬ್ ತಯಾರಿಸುತ್ತಿರುವಾಗ ಸ್ಫೋಟವಾಗಿದೆ. ಅವನು ನಾಡಬಾಂಬ್ ತಯಾರಿಸಿ ಮನೆಯಲ್ಲಿ ಇಡುತ್ತಿದ್ದನು. ಹೆಚ್ಚುದಿನಗಳವರೆಗೆ ಬಾಂಬ್ ತಯಾರಿಸಿ ಇಟ್ಟಿದ್ದರಿಂದ ಉಷ್ಣತೆಯಿಂದಾಗಿ ಅದು ಸ್ಫೋಟಗೊಂಡಿರಬಹುದು. ಗಾಯಗೊಂಡ ಜಿತಿನ ಆರೋಗ್ಯ ಚೇತರಿಸಿಕೊಂಡ ಬಳಿಕ ಅವನನ್ನು ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.