ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಉಗ್ರರ ದಾಳಿ ಸಂಚು ಬಯಲು : ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಶಂಕಿತರ ಬಂಧನ !

ನವದೆಹಲಿ – ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಉಗ್ರರು ದಾಳಿಯ ಸಂಚು ಬಯಲಾಗಿದೆ. ಈ ಸಂಚಿನಲ್ಲಿ ಭಾಗಿಯಾಗಿರುವ ಇಬ್ಬರು ಸಂಕಿತರನ್ನು ಇತ್ತೀಚೆಗೆ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದ್ದು, ಅವರಿಂದ 2 ನಾಡಬಾಂಬ್ ಗಳನ್ನು ಜಪ್ತಿ ಮಾಡಲಾಗಿದೆ.

1. ದೆಹಲಿ ಪೊಲೀಸರು ಸಂಕಿತ ಉಗ್ರವಾದಿ ನೌಶಾದ ಮತ್ತು ಜಗ್ಗಾರನ್ನು ಜಹಾಂಗೀರಪುರಿಯಿಂದ `ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ಯ ಅಡಿಯಲ್ಲಿ ಬಂಧಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ಪಟಿಯಾಲಾ ಹೌಸ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಅವರನ್ನು 14 ದಿನಗಳ ಪೊಲೀಸ ಕಸ್ಟಡಿಗೆ ನೀಡಲಾಗಿದೆ.

2. ತನಿಖೆಯ ಸಮಯದಲ್ಲಿ ಆರೋಪಿಗಳು, ದೆಹಲಿಯ ಹೊರಗಿನ ಭಾಲಸ್ವ ಡೇರಿಯಲ್ಲಿ ನಾಡಬಾಂಬ್ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದರು. ತದನಂತರ ದೆಹಲಿ ಪೊಲೀಸರು ಜನವರಿ 13, 2023 ರಂದು ದಾಳಿ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡರು. ಆರೋಪಿಗಳ ಬಂಧನದ ಸಮಯದಲ್ಲಿ ಅವರಿಂದ 3 ಪಿಸ್ತೂಲು ಮತ್ತು 22 ಕಾರ್ಟ್ರಿಜ್ ಗಳನ್ನು ಜಪ್ತಿ ಮಾಡಲಾಗಿದೆ.

3. ಪೊಲೀಸರ ತನಿಖೆಯ ಸಮಯದಲ್ಲಿ ಆರೋಪಿ ಜಗಜಿತ ಉರ್ಫ ಜಗ್ಗಾ ಈತ ನಿಷೇಧಿತ ಖಲಿಸ್ತಾನಿ ಗುಂಪಿನ ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಇನ್ನೊಂದೆಡೆ ಆರೋಪಿ ನೌಶಾದ `ಹರಕತ-ಉಲ್- ಅನ್ಸಾರ’ ಈ ಉಗ್ರವಾದಿ ಸಂಘಟನೆಯೊಂದಿಗೆ ನಂಟಿದ್ದು, ಎರಡು ಹತ್ಯಾಕಾಂಡದಲ್ಲಿ ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿದ್ದನು.

ಸಂಪಾದಕೀಯ ನಿಲುವು

ಪ್ರತಿ ವರ್ಷ ಜನರು ಉಗ್ರರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವ ದಿನವನ್ನು ಆಚರಿಸಬೇಕಾಗುತ್ತಿರುವುದು, ಇದು ಕಳೆದ 75 ವರ್ಷದ ಎಲ್ಲ ಸರಕಾರಗಳಿಗೆ ನಾಚಿಕೆಗೇಡು !