`ಇಸ್ರೋ’ವು ಉಪಗ್ರಹದ ಮೂಲಕ ತೆಗೆಗಿದ್ದ ಜೋಶಿಮಠದ ಭೂಕುಸಿತದ ಚಿತ್ರಗಳನ್ನು ಜಾಲತಾಣದಿಂದ ತೆಗೆಯಿತು !

ಉತ್ತರಖಂಡದ ಸಚಿವರ ಸೂಚನೆಯ ನಂತರ ಕ್ರಮ

ಉತ್ತರಾಖಂಡ ಸರಕಾರದ ಸಚಿವ ಡಾ. ಧನಸಿಂಹ ರಾವತ (ಬಲದಲ್ಲಿ)

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ಸರಕಾರದ ಸಚಿವ ಡಾ. ಧನಸಿಂಹ ರಾವತ ಇವರ ಸೂಚನೆಯ ಮೇರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ’ವು ಉಪಗ್ರಹದ ಮೂಲಕ ತೆಗೆದ ಜೋಶಿಮಠ ಗ್ರಾಮದ ಭೂಕುಸಿತದ ಛಾಯಾಚಿತ್ರಗಳನ್ನು ತೆಗೆಯಲು ಹೇಳಿದ ನಂತರ ಅದು ತೆಗೆದಿದೆ. ಈ ಛಾಯಾಚಿತ್ರದ ಮೂಲಕ ಜೋಶಿಮಠವು ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿ ಮೀಟರ್ ಕೂಸಿದಿರುವುದು ಬೆಳಕಿಗೆ ಬಂದ ನಂತರ ಭಯದ ವಾತಾವರಣ ನಿರ್ಮಾಣವಾಗಿತ್ತು.

ಸಚಿವ ಡಾ. ಧನಸಿಂಹ ರಾವತ ಇವರು, ಇಸ್ರೋದ ಛಾಯಾಚಿತ್ರವು ವಾರ್ತಾವಾಹಿನಿಯಲ್ಲಿ ಪ್ರಸಾರ ಮಾಡಿದ ನಂತರ ಜೋಶಿಮಠದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಇಸ್ರೋದ ಸಂಚಾಲಕರ ಜೊತೆಗೆ ಸಂಚಾರ ವಾಣಿಯಲ್ಲಿ ಮಾತನಾಡಿದಾಗ ನಾನು ಅವರಿಗೆ `ಇದರ ಬಗ್ಗೆ ಇಸ್ರೋದಿಂದ ಅಧಿಕೃತವಾಗಿ ಮನವಿ ಪ್ರಸ್ತುತಪಡಿಸಬೇಕು ಅಥವಾ ಈ ಛಾಯಾಚಿತ್ರಗಳನ್ನು ತೆಗೆಯಬೇಕೆಂದು’, ವಿನಂತಿಸಿದೆ. ಅದರ ನಂತರ ಇಸ್ರೋ ತನ್ನ ಜಾಲತಾಣದಿಂದ ಈ ಛಾಯಾಚಿತ್ರಗಳನ್ನು ತೆಗೆಯಿತು.