ಕಾಂಚೀಪುರಂ (ತಮಿಳುನಾಡು)ನಲ್ಲಿ ಸ್ನೇಹಿತನ ಮುಂದೆಯೇ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲತ್ಕಾರ !

ಐವರು ಆರೋಪಿಗಳ ಬಂಧನ

ಕಾಂಚೀಪುರಂ (ತಮಿಳುನಾಡು) – ಇಲ್ಲಿನ ಬೆಂಗಳೂರು-ಪುದುಚ್ಚೇರಿ ಹೆದ್ದಾರಿಯ ಬಳಿ ಮಹಾವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಬೆದರಿಸಿ ಆಕೆಯ ಮೇಲೆ ಸಾಮೂಹಿಕ ಬಲತ್ಕಾರ ಮಾಡಲಾಯಿತು. ಆರೋಪಿಗಳ ಹೆಸರು ವಿಮಲ, ಮಣಿಕಂದನ, ಶಿವಕುಮಾರ, ವಿಘ್ನೇಶ ಮತ್ತು ಥೇನರಸೂ ಆಗಿದೆ, ಪೊಲೀಸರು ಇವರೆಲ್ಲರನ್ನೂ ಬಂಧಿಸಿದ್ದಾರೆ. ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತನು ಒಂದು ಖಾಸಗಿ ಶಾಲೆಯ ಬಳಿ ನಿಂತು ಮಾತನಾಡುತ್ತಿರುವಾಗ ಆರೋಪಿಗಳು ಅವರನ್ನು ಸುತ್ತುವರಿದು ಚೂರಿಯಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಸಿದರು. ನಂತರ ಅವರು ಸ್ನೇಹಿತನ ಮುಂದೆಯೇ ಸಂತ್ರಸ್ಥೆಯ ಮೇಲೆ ಬಲತ್ಕಾರ ಮಾಡಿದರು.

ಸಂಪಾದಕೀಯ ನಿಲುವು

  • ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಅಧೋಗತಿ !
  • ಹಾಡುಹಗಲೆ ಓರ್ವ ವಿದ್ಯಾಥಿನಿಯ ಮೇಲೆ ಸಾಮೂಹಿಕ ಬಲತ್ಕಾರವಾಗುವುದು ಪೊಲೀಸರಿಗೆ ನಾಚಿಕೆಗೇಡು !
  • ಈಗ ತಮಿಳುನಾಡು ಸರಕಾರವು ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು !