ಮಂಗಳೂರಿನ ನೇತ್ರಾವತಿ ನದಿಯಲ್ಲಿ ಬಜರಂಗದಳದ ಕಾರ್ಯಕರ್ತನ ಶವ ಪತ್ತೆ !

ಇದು ಹತ್ಯೆ ಎಂಬುದು ಕುಟುಂಬದವರ ಆರೋಪ !

ಬಜರಂಗದಳದ ಕಾರ್ಯಕರ್ತ ರಾಜೇಶ ಪೂಜಾರಿ

ಮಂಗಳೂರು (ಕರ್ನಾಟಕ) – ನೇತ್ರಾವತಿ ನದಿಯಲ್ಲಿ ಇಲ್ಲಿನ ಬಜರಂಗದಳದ ಕಾರ್ಯಕರ್ತನಾದ ರಾಜೇಶ ಪೂಜಾರಿ (೩೬ ವರ್ಷ)ಯವರ ಶವ ಪತ್ತೆಯಾಗಿದೆ. ‘ರಾಜೇಶ ಪೂಜಾರಿಯವರ ಸಾವು ಅಪಘಾತವಲ್ಲ. ಪೂಜಾರಿಯವರ ಕುಟುಂಬದವರು ‘ಈ ಘಟನೆಗೆ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳ ಸಾಲಿಗೆ ಸಂಬಂಧವಿರಬಹುದು’, ಎಂದು ಆರೋಪಿಸಿದ್ದಾರೆ. ಪೊಲೀಸ್ ಅಧೀಕ್ಷಕರಾದ ಋಷಿಕೇಶ ಸೋನಾವಣೆಯವರು ಈ ಪ್ರಕರಣದಲ್ಲಿ ಬಂಟ್ವಾಳ ನಗರ ಪೊಲೀಸರು ಅಪರಾಧವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿರುವ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿನ ಮಂಗಳೂರು ಜಿಲ್ಲೆಯನ್ನು ಜಾತೀಯ ಹಿಂಸಾಚಾರದ ದೃಷ್ಟಿಯಲ್ಲಿ ಸಂವೇದನಾಶೀಲವೆಂದು ಪರಿಗಣಿಸಲಾಗುತ್ತದೆ. ೨೦೧೫ರಲ್ಲಿಯೂ ಬಜರಂಗದಳದ ಓರ್ವ ಕಾರ್ಯಕರ್ತನ ಹತ್ಯೆಯ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮಹಂಮದ ಅನೀಸ, ಮಹಂಮದ ಇಬ್ರಾಹಿಮ, ಮಹಂಮದ ಇಲಿಯಾಸ ಮತ್ತು ಮಹಂಮದ ರಶೀದನನ್ನು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು !